Wednesday, June 26, 2024
Homeತಾಜಾ ಸುದ್ದಿಮುಂಬೈ: ಬಿಗ್ ಬಾಸ್ ಖ್ಯಾತಿಯ ಪ್ರಸಿದ್ಧ ನಟ ಹೃದಯಾಘಾತದಿಂದ ನಿಧನ!

ಮುಂಬೈ: ಬಿಗ್ ಬಾಸ್ ಖ್ಯಾತಿಯ ಪ್ರಸಿದ್ಧ ನಟ ಹೃದಯಾಘಾತದಿಂದ ನಿಧನ!

spot_img
- Advertisement -
- Advertisement -

ಮುಂಬೈ:ನಟ ಸಿದ್ಧಾರ್ಥ್ ಶುಕ್ಲ(40 ) ಗುರುವಾರದಂದು ಕೂಪರ್ ಆಸ್ಪತ್ರೆಯಲ್ಲಿ ಹೃದಾಯಾಘಾತದಿಂದ ನಿಧರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಾತ್ರಿ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡು ಮಲಗಿದ್ದವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯಲ್ಲಿ ದೃಢಪಡಿಸಿದ್ದಾರೆ. ಸದ್ಯ ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡುಯುತ್ತಿದೆ ಎಂದು ಹೇಳಲಾಗಿದೆ.

ಸಿದ್ಧಾರ್ಥ್ ಶುಕ್ಲಾ ತನ್ನ ವೃತ್ತಿಜೀವನವನ್ನು ಶೋಬಿಜ್‌ನಲ್ಲಿ ಮಾಡೆಲ್ ಆಗಿ ಆರಂಭಿಸಿದ್ದು, ಬಾಬುಲ್ ಕಾ ಆಂಗನ್ ಚೂಟೇ ನಾ ಎಂಬ ದೂರದರ್ಶನ ಕಾರ್ಯಕ್ರಮದ ಪ್ರಮುಖ ಪಾತ್ರದೊಂದಿಗೆ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಜಾನೆ ಪೆಹ್ಚಾನೆ ಸೇ … ಯೆ ಅಜ್ನಬ್ಬಿ, ಮತ್ತು ಲವ್ ಯು ಜಿಂದಗಿ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬಾಲಿಕಾ ವಧು ಎಂಬ ಸೀರಿಯಲ್ ಮುಖಾಂತರ ಮನೆ ಮಾತಾಗಿದ್ದರು.ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರು ಕೂಡ ಆಗಿದ್ದರು.

- Advertisement -
spot_img

Latest News

error: Content is protected !!