Tuesday, June 9, 2026
Homeಇತರಕಾರ್ಕಳ: ಹಲ್ಲು ಉಜ್ಜುವ ಪೇಸ್ಟ್ ಎಂದು ಇಲಿ ಪಾಷಾಣದ ಪೇಸ್ಟ್‌ನಲ್ಲಿ ಹಲ್ಲುಜ್ಜಿದ ವೃದ್ಧೆ ಸಾವು...!

ಕಾರ್ಕಳ: ಹಲ್ಲು ಉಜ್ಜುವ ಪೇಸ್ಟ್ ಎಂದು ಇಲಿ ಪಾಷಾಣದ ಪೇಸ್ಟ್‌ನಲ್ಲಿ ಹಲ್ಲುಜ್ಜಿದ ವೃದ್ಧೆ ಸಾವು…!

- Advertisement -
- Advertisement -

ಕಾರ್ಕಳ: ಹಲ್ಲು ಉಜ್ಜುವ ಪೇಸ್ಟ್ ಎಂದು ತಪ್ಪಾಗಿ ಗ್ರಹಿಸಿ ಇಲಿ ಪಾಷಾಣದ ಪೇಸ್ಟ್‌ನಲ್ಲಿ ಹಲ್ಲುಜ್ಜಿ ತೀವ್ರ ಅಸ್ವಸ್ಥಗೊಂಡಿದ್ದ ಅಜ್ಜಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ನಡೆದಿದೆ.

ಕಾರ್ಕಳ ಕಾಬೆಟ್ಟುವಿನ ಕಲಾವತಿ(61) ಎಂಬವರು ಘಟನೆಯಲ್ಲಿ ಮೃತಪಟ್ಟ ವೃದ್ಧೆಯಾಗಿದ್ದಾರೆ. ಅವರನ್ನು ಕಾರ್ಕಳ ನಗರದ ಕಾರ್ಕಳ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆಯುತ್ತಿದ್ದ ಅವರು ಸಪ್ಪೆಂಬರ್ ೧ರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿಸಿವೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Latest News

error: Content is protected !!