- Advertisement -
![]()
- Advertisement -
ಪಣಂಬೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗರೆ ಪಲ್ಗುಣಿ ನದಿಯಲ್ಲಿ ಸುಮಾರು 40-43ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ನೀಲಿ ಬಣ್ಣದ ಉದ್ದ ತೋಲಿನ ಜೀನ್ಸ್ ಅಂಗಿ ಅದರ ಒಳಗೆ ಹಳದಿ ಮತ್ತು ನೀಲಿ ಬಣ್ಣದ ದಪ್ಪಗೆರೆಗಳ ಟೀ ಶರ್ಟ್, ಬಳಿ ಬಣ್ಣದ ಬರಹಗಳಿರುವ ಕಪ್ಪು ಬಣ್ಣದ ಸ್ಪೋರ್ಟ್ಸ್ ಪ್ಯಾಂಟ್ ಧರಿಸಿದ್ದಾರೆ. ಇನ್ನು ಪಣಂಬೂರು ಪೊಲೀಸರು ಮೃತದೇಹವನ್ನು ಈಗಾಗಲೇ ಮೇಲೆಕ್ಕೆತ್ತಿ, ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಚಹರೆಯ ವ್ಯಕ್ತಿಯ ಪರಿಚಯಸ್ಥರು, ವಾರೀಸುದಾರರು ಇದ್ದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ +91 94808 05331 ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪಣಂಬೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
- Advertisement -


