Thursday, May 16, 2024
Homeತಾಜಾ ಸುದ್ದಿ'ಪ್ರಯಾಣಿಕ'ರ ಬಗ್ಗೆ ಕಾಳಜಿ ಮರೆತ ಸಾರಿಗೆ ಇಲಾಖೆ: ಪಾರ್ಶವಾಯು ಪೀಡಿತ ವ್ಯಕ್ತಿಯಿಂದ BMTC ಬಸ್ ಚಾಲನೆ

‘ಪ್ರಯಾಣಿಕ’ರ ಬಗ್ಗೆ ಕಾಳಜಿ ಮರೆತ ಸಾರಿಗೆ ಇಲಾಖೆ: ಪಾರ್ಶವಾಯು ಪೀಡಿತ ವ್ಯಕ್ತಿಯಿಂದ BMTC ಬಸ್ ಚಾಲನೆ

spot_img
- Advertisement -
- Advertisement -

ಬೆಂಗಳೂರು: 9 ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ತಡೆಯಲು ಹರಸಾಹಸಪಡುತ್ತಿರುವ ಸರ್ಕಾರದ ಬೆಳವಣಿಗೆಗಳ ನಡುವೆ, ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರು ಒಂದೇ ಕೈಯಲ್ಲಿ ಬಿಎಂಟಿಸಿ ಬಸ್ ಓಡಿಸಿದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಡಿಪೋ 40ರಲ್ಲಿ ಬಲಗೈ ಸ್ವಾಧೀನ ಕಳೆದುಕೊಂಡಿರುವ ಸಿಬ್ಬಂದಿಗೆ ಬಸ್ ಓಡಿಸೋದಕ್ಕೆ ಅವಕಾಶ ನೀಡಲಾಗಿದೆ. ಹಲವು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತನಾಗಿ ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನೋರ್ವನಿಂದಲೇ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂತಹ ಚಾಲಕನು ಚಾಲನೆ ಮಾಡುವಂತ ಸಂದರ್ಭದಲ್ಲಿ ಏನಾದ್ರೂ ಅನಾಹುತ ಆದ್ರೇ ಯಾರು ಹೊಣೆ ಎಂಬುದಾಗಿ ಸಾರ್ವಜನಿಕರು ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.

- Advertisement -
spot_img

Latest News

error: Content is protected !!