Monday, April 29, 2024
Homeಕರಾವಳಿಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸ್ಥಾಪಕರ ದಿನಾಚರಣೆ ಹಾಗೂ 3ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸ್ಥಾಪಕರ ದಿನಾಚರಣೆ ಹಾಗೂ 3ನೇ ವಾರ್ಷಿಕ ಘಟಿಕೋತ್ಸವ

spot_img
- Advertisement -
- Advertisement -

ಮಂಗಳೂರು, ಎಪ್ರಿಲ್ 16: ಎ. ಶಾಮರಾವ್ ಫೌಂಡೇಶನ್, ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವವು (ವರ್ಚುವಲ್) ಶನಿವಾರ 17ನೇ ಎಪ್ರಿಲ್ 2021 ರಂದು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಸ್ಥಾಪಕರ ದಿನಾಚರಣೆಯು ಪೂರ್ವಾಹ್ನ 11.00 ಗಂಟೆಗೆ ನಡೆಯಲಿದ್ದು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಚೆಯರ್‌ಮನ್ ಶ್ರೀ ಅಲೆನ್ ಸಿ. ಎ. ಪಿರೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಥಾಪಕರ ದಿನಾಚರಣೆಯ ಉಪನ್ಯಾಸವನ್ನು ನೀಡಲಿರುವರು.

ಈ ಸಂದರ್ಭದಲ್ಲಿ 2021ನೇ ಸಾಲಿನ ಎ. ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿಯನ್ನು ಕರ್ನಾಟಕ ಬ್ಯಾಂಕಿನ ಎಂ.ಡಿ. ಶ್ರೀ ಮಹಾಬಲೇಶ್ವರ ಎಂ. ಎಸ್. ಹಾಗೂ ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಡುಪಿ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನ ಶಿಕ್ಷಕ ಶ್ರೀ ಹರಿಕೃಷ್ಣ ದಂಬೆ ಇವರಿಗೆ ನೀಡಲಾಗುವುದು.

ಸಂಜೆ 4 ಗಂಟೆಗೆ ನಡೆಯಲಿರುವ ಘಟಿಕೋತ್ಸವದಲ್ಲಿ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಜಗದ್ಗುರು, ಶ್ರೀ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನ, ಉಪೇಂದ್ರ ತೀರ್ಥ ಪೀಠ, ಶ್ರೀ ಪುತ್ತಿಗೆ ಮಠ, ಉಡುಪಿ ಹಾಗೂ ಆಚಾರ್ಯ ಶ್ರೀ ಧನ್ವಂತ್ ಸಿಂಗ್, ಭಾರತೀಯ ವೈದಿಕ ವಾಸ್ತುಶಿಲ್ಪ, ಆಯುರ್ವೇದ ಮತ್ತು ತತ್ವ ವಿಜ್ಞಾನ ಪರಿಣಿತರು, ಬೆಂಗಳೂರು ಇವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗುವುದು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಕುಲಪತಿ ಡಾ. ಪಿ.ಎಸ್. ಐತಾಳ್, ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್, ಕುಲಸಚಿವರುಗಳಾದ ಡಾ. ಅನಿಲ್ ಕುಮಾರ್, ಡಾ. ಶ್ರೀನಿವಾಸ್ ಮಯ್ಯ (ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ಅಭಿವೃದ್ಧಿ), ಶ್ರೀ ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತು ಅಭಿವೃದ್ಧಿ) ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಈ ಘಟಿಕೋತ್ಸವದಲ್ಲಿ ಒಟ್ಟು 327 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದು ಇವರಲ್ಲಿ 114 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ 205 ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಅಂತೆಯೇ 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿದಂತೆ ಒಟ್ಟು 29 ಪದವಿ ವಿದ್ಯಾರ್ಥಿಗಳು, 16 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರ‍್ಯಾಂಕ್, 1 ವಿದ್ಯಾರ್ಥಿಗೆ ಎಂ.ಎಸ್. ಪದವಿ, 1 ಸಂಶೋಧನಾ ವಿದ್ಯಾರ್ಥಿಗೆ ಪಿ. ಹೆಚ್. ಡಿ. ಪದವಿ, 7 ಡಿ.ಎಸ್ಸಿ. ಪದವಿ ಹಾಗೂ 2 ಮಂದಿಗೆ ಗೌರವ ಡಾಕ್ಟರೇಟ್ ಡಿ.ಲಿಟ್. ಪದವಿಗಳನ್ನು ಪ್ರದಾನ ಮಾಡಲಾಗುವುದು.

ಕುಲಪತಿ ಡಾ. ಪಿ. ಎಸ್. ಐತಾಳ್, ಡಾ. ಅನಿಲ್ ಕುಮಾರ್ – ಕುಲಸಚಿವ, ಡಾ. ಶ್ರೀನಿವಾಸ್ ಮಯ್ಯ (ಮೌಲ್ಯಮಾಪನ), ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕಿಯಾದ ಪ್ರೊ. ಅಶ್ವಿನಿ ಈ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಮಹಾಬಲೇಶ್ವರ ಎಮ್. ಎಸ್‌

ಶ್ರೀ ಮಹಾಬಲೇಶ್ವರ ಎಮ್. ಎಸ್‌ರವರಿಗೆ ಎ. ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿ 2021
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ, ಕೊಡುಗೆ ನೀಡಿ ಯಶಸ್ವಿಯಾದ ಅಪರೂಪದ ಸಾಧಕರನ್ನು ಗುರುತಿಸಿ ಗೌರವಿಸುವ ಧ್ಯೇಯ ಹೊಂದಿರುವ ಎ.ಶಾಮರಾವ್ ಪ್ರತಿಷ್ಠಾನವು ಶ್ರೀ ಮಹಾಬಲೇಶ್ವರ ಎಮ್. ಎಸ್ ಇವರನ್ನು ಪ್ರಸಕ್ತ ವರ್ಷ 2021ರ ಎ.ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬ್ಯಾಂಕಿಂಗ್, ಸಾಲ ಯೋಜನೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಮಹಾಬಲೇಶ್ವರ ಎಮ್. ಎಸ್ ಇವರಿಗೆ ಪಾಂಡೇಶ್ವರದ ಶ್ರೀನಿವಾಸ್ ಶೈಕ್ಷಣಿಕ ಆವರಣದಲ್ಲಿ ಎಪ್ರಿಲ್ 17ರಂದು ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಡಾ. ಸಿಎ. ಎ. ರಾಘವೇಂದ್ರರಾವ್‌ರವರ, ಅಧ್ಯಕ್ಷತೆಯಲ್ಲಿ ನಡೆಯುವ ಎ.ಶಾಮರಾವ್ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಯೋಜಕ ಡಾ.ಎ.ಆರ್ ಶಬರಾಯ ತಿಳಿಸಿರುತ್ತಾರೆ.

ಹರಿಕೃಷ್ಣ ದಂಬೆ

ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2021
ಮಂಗಳೂರಿನ ಎ. ಶಾಮರಾವ್ ಪ್ರತಿಷ್ಠಾನವು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲಾ ವಿಭಾಗ ಹಾಗೂ ಪದವಿ ಪೂರ್ವ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರತಿಷ್ಠಿತ ಎ.ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಿದ್ದು 2021ರ ಸಾಲಿನ ಈ ಪ್ರಶಸ್ತಿಗೆ ಉಡುಪಿ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನ ಶಿಕ್ಷಕರಾದ ಶ್ರೀ ಹರಿಕೃಷ್ಣ ದಂಬೆ ಇವರು ಆಯ್ಕೆಯಾಗಿದ್ದಾರೆ. ಇವರಿಗೆ ಪಾಂಡೇಶ್ವರದ ಶ್ರೀನಿವಾಸ್ ಶೈಕ್ಷಣಿಕ ಆವರಣದಲ್ಲಿ ಎಪ್ರಿಲ್ 17ರಂದು ನಡೆಯುವ ಎ.ಶಾಮರಾವ್ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಯೋಜಕ ಡಾ.ಎ.ಆರ್ ಶಬರಾಯ ತಿಳಿಸಿರುತ್ತಾರೆ.

- Advertisement -
spot_img

Latest News

error: Content is protected !!