Wednesday, June 3, 2026
Homeತಾಜಾ ಸುದ್ದಿಬಲವಂತವಾಗಿ ಬೈರತಿ ಸುರೇಶ್‌ಗೆ ಕೇಸರಿ ಶಾಲು ಹಾಕಿದ ಬಿಜೆಪಿ ಶಾಸಕರು: ರಾಷ್ಟ್ರಪತಿ ಚುನಾವಣೆ ಮತದಾನದ ವೇಳೆ...

ಬಲವಂತವಾಗಿ ಬೈರತಿ ಸುರೇಶ್‌ಗೆ ಕೇಸರಿ ಶಾಲು ಹಾಕಿದ ಬಿಜೆಪಿ ಶಾಸಕರು: ರಾಷ್ಟ್ರಪತಿ ಚುನಾವಣೆ ಮತದಾನದ ವೇಳೆ ನಡೆದ ಪ್ರಸಂಗ

- Advertisement -
- Advertisement -

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಮತದಾನದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್‌ಗೆ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿದ ಪ್ರಸಂಗವೂ ನಡೆಯಿತು.

ಸೋಮವಾರ ವಿಧಾನಸೌಧದಲ್ಲಿ ರಾಷ್ಟ್ರಪತಿ ಚುನಾವಣೆ ಮತದಾನದ ಸಂದರ್ಭದಲ್ಲಿ ಮತದಾನಕ್ಕೆ ಆಗಮಿಸಿದ್ದ ಬೈರತಿ ಸುರೇಶ್‌ಗೆ ಬಿಜೆಪಿ ‌ಶಾಸಕರಾದ ರಾಜೂಗೌಡ ಅವರು ಕೇಸರಿ ಶಾಲನ್ನು ಹಾಕಿದರು. ಈ ವೇಳೆ ಬಿಜೆಪಿ ಶಾಸಕರಾದ ಗೂಳಿಹಟ್ಟಿ ಶೇಖರ್ ಹಾಗೂ ಎಂಪಿ ರೇಣುಕಾಚಾರ್ಯ ಅವರು ಸಾಥ್ ನೀಡಿದರು. ಕೇಸರಿ ಶಾಲು ಹಾಕಿಸಿ ಮಾಧ್ಯಮಗಳಿಗೆ ಫೋಸ್ ಕೊಡಿಸಿದರು. ಬಿಜೆಪಿ ಶಾಸಕರಿಂದ ಒತ್ತಾಯ ಪೂರ್ವಕವಾಗಿ ಶಾಲು ಹಾಕಿಸಿಕೊಂಡ ಬೈರತಿ ಸುರೇಶ್ ಬಳಿಕ‌ ಶಾಲನ್ನು ತೆಗೆದು ವಾಪಸ್ ಬಿಜೆಪಿ ಶಾಸಕರಿಗೆ ವಾಪಸ್ ನೀಡಿದರು.

- Advertisement -

Latest News

error: Content is protected !!