Sunday, June 7, 2026
Homeತಾಜಾ ಸುದ್ದಿಮೈಸೂರು ಅರಮನೆಗೆ ಬಂದು ಯದುವೀರ್‌ಗೆ ಬಿ ಫಾರಂ ನೀಡಿದ ಬಿಜೆಪಿ ಮುಖಂಡರು

ಮೈಸೂರು ಅರಮನೆಗೆ ಬಂದು ಯದುವೀರ್‌ಗೆ ಬಿ ಫಾರಂ ನೀಡಿದ ಬಿಜೆಪಿ ಮುಖಂಡರು

- Advertisement -
- Advertisement -

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ‌ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಮುಖಂಡರು ಮೈಸೂರು ಅರಮನೆಯಲ್ಲಿ ಸೋಮವಾರ ‘ಬಿ ಫಾರಂ’ ವಿತರಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಗ್ರಾಮಾಂತರ ‌ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಶಾಸಕರಾದ ಪ್ರೀತಂ ಗೌಡ, ಎಸ್‌.ರಾಮದಾಸ್, ವಿಧಾನಪರಿಷತ್ ಮಾಜಿ‌ ಸದಸ್ಯ ಬಿ.ಸಿದ್ದರಾಜು, ಯದುವೀರ್ ತಾಯಿ ಪ್ರಮೋದಾದೇವಿ ಒಡೆಯರ್ ಹಾಗೂ ಮುಖಂಡ ಮಹೇಶ್ ಪಾಲ್ಗೊಂಡಿದ್ದರು.

ಯದುವೀರ್ ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ.

- Advertisement -

Latest News

error: Content is protected !!