Friday, June 5, 2026
Homeತಾಜಾ ಸುದ್ದಿರಾಜ್ಯಸಭೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಹೈಕಮಾಂಡ್ !

ರಾಜ್ಯಸಭೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಹೈಕಮಾಂಡ್ !

- Advertisement -
- Advertisement -

ಬೆಂಗಳೂರು: ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರಕಟವಾಗಿದ್ದು, ಅಚ್ಚರಿ ಹೆಸರನ್ನು ಘೋಷಿಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ.

ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಡಿ.1ರಂದು ಚುನಾವಣೆ ನಡೆಯಲಿದೆ. ಇದೀಗ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರನ್ನು ಪ್ರಕಟಿಸಿದ್ದು, ಮಂಗಳೂರು ಮೂಲದ ಮತ್ತು ಅರೆಸ್ಸೆಸ್ ನ ಸಾಮಾನ್ಯ ಕಾರ್ಯಕರ್ತ ಡಾ.ಕೆ ನಾರಾಯಣ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ರಾಜ್ಯ ನಾಯಕರಿಗೆ ಮತ್ತೆ ಶಾಕ್ ನೀಡಿದೆ.

ಡಾ.ಕೆ. ನಾರಾಯಣ

ದೇವಾಂಗ ಸಮುದಾಯಕ್ಕೆ ಸೇರಿರುವ ಡಾ.ಕೆ ನಾರಾಯಣರು ಪ್ರಸ್ತುತ ಬೆಂಗಳೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾರೆ.

ರಾಜ್ಯ ಬಿಜೆಪಿ ಘಟಕ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿತ್ತು. ಆದರೆ ಹೈಕಮಾಂಡ್ ರಾಜ್ಯ ಬಿಜೆಪಿ ಸೂಚಿಸಿದ್ದ ಮೂವರ ಹೆಸರನ್ನು ತಿರಸ್ಕರಿಸಿ, ಬಿಜೆಪಿಯಿಂದ 50 ವರ್ಷಗಳಿಂದ ಆರ್ ಎಸ್ ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಂತ ಡಾ.ನಾರಾಯಣ್ ಅವರಿಗೆ ಅಚ್ಚರಿಯೆನ್ನುವಂತೆ ಟಿಕೆಟ್ ಘೋಷಣೆ ಮಾಡಿದೆ.

- Advertisement -

Latest News

error: Content is protected !!