Thursday, June 4, 2026
Homeಕರಾವಳಿಮಂಗಳೂರು : ದ್ವಿಚಕ್ರ ವಾಹನ ಕಳವುಗೈದ ಆರೋಪಿಯ ಬಂಧನ

ಮಂಗಳೂರು : ದ್ವಿಚಕ್ರ ವಾಹನ ಕಳವುಗೈದ ಆರೋಪಿಯ ಬಂಧನ

- Advertisement -
- Advertisement -

 ಮಂಗಳೂರು; ದ್ವಿಚಕ್ರವಾಹನವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಉಳ್ಳಾಲ ತೊಕ್ಕೊಟ್ಟು ಮೂಲದ ಶನೀಝ್ ಬಂಧಿತ.

ಮಂಗಳೂರಿನ ಕಂಕನಾಡಿ ಮತ್ತು ಬೆಂದೂರ್ ವೆಲ್ ಪ್ರದೇಶಗಳಲ್ಲಿ ಕಳವಾಗಿದ್ದ ಬೈಕ್ ಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಾಗ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಶನೀಝ್ ಈತನು ಕಳವು ಮಾಡಿದ ಸ್ಕೂಟರನಲ್ಲಿ ನಂಬರ್ ಪ್ಲೇಟ್ ಇಲ್ಲದೆ ತಿರುಗಾಡುತ್ತಿದ್ದಾಗ, ನಗರದ ಪಂಪುವೆಲ್ ಬ್ರಿಡ್ಜ್ ಬಳಿ ಆತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಕಳವು ಮಾಡಿದ್ದ ಸ್ಕೂಟರನ್ನು ಹಾಗೂ ಈ ಹಿಂದೆ ಈತನು ಕಳವು ಮಾಡಿದ್ದ ಮತ್ತೊಂದು ಹೋಂಡಾ ಆಕ್ಟಿವಾ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.

ಆತನಿಂದ ಸುಮಾರು ಒಂದು ಲಕ್ಷ ಹತ್ತು ಸಾವಿರ ಬೆಲೆ ಬಾಳುವ ಎರಡು ದ್ವಿ ಚಕ್ರ ವಾಹನಗಳನ್ನು ಕದ್ರಿ ಪೊಲೀಸರು ಸ್ವಾಧಿನ ಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!