Thursday, June 4, 2026
Homeಕರಾವಳಿಉಪ್ಪಿನಂಗಡಿ; ರಾತ್ರಿ ಊಟ ಮಾಡಿ ತಾಯಿಯೊಂದಿಗೆ ಮಲಗಿದ್ದ ಯುವತಿ ನಾಪತ್ತೆ

ಉಪ್ಪಿನಂಗಡಿ; ರಾತ್ರಿ ಊಟ ಮಾಡಿ ತಾಯಿಯೊಂದಿಗೆ ಮಲಗಿದ್ದ ಯುವತಿ ನಾಪತ್ತೆ

- Advertisement -
- Advertisement -

ಉಪ್ಪಿನಂಗಡಿ; ರಾತ್ರಿ ಊಟ ಮಾಡಿ ತಾಯಿಯೊಂದಿಗೆ ಮಲಗಿದ್ದ ಯುವತಿ ನಾಪತ್ತೆಯಿಗರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಗ್ರಾಮದ‌ ನಿವಾಸಿ ಮುಸ್ತಫಾ ಎಂಬವರ ಪುತ್ರಿ ಫಾತಿಮತ್ ಶೌಹಾನ  (17) ನಾಪತ್ತೆಯಾದಾಕೆ.

ಆಗಸ್ಟ್ 22 ರಂದು ಫಾತಿಮತ್ ಶೌಹಾನ ರಾತ್ರಿ ಊಟ ಮುಗಿಸಿ ತನ್ನ ತಾಯಿಯ ಜೊತೆ ಮಲಗಿದ್ದಳು. ಮರುದಿನ ಬೆಳಿಗ್ಗೆ ನೋಡಿದಾಗ  ಆಕೆ ನಾಪತ್ತೆಯಾಗಿದ್ದಾಳೆ. ಅಲ್ಲದೇ, ಅವಳು ಉಪಯೋಗಿಸುವ ಮೊಬೈಲ್ ಕೂಡಾ ಕಾಣೆಯಾಗಿದೆ. ಆಕೆಯ ಮೊಬೈಲ್  ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು  ಈವರೆಗೆ ಹುಡುಕಾಡಿದರು ಪತ್ತೆಯಾಗಿಲ್ಲ ಎಂದು ಆಕೆಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!