Thursday, June 4, 2026
Homeಕರಾವಳಿಬೆಳ್ತಂಗಡಿ : 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ:ಶ್ರೀಗಂಧ ಕಳ್ಳತನ ಆರೋಪಿಯ ಹೆಡೆಮುರಿಕಟ್ಟಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ:ಶ್ರೀಗಂಧ ಕಳ್ಳತನ ಆರೋಪಿಯ ಹೆಡೆಮುರಿಕಟ್ಟಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಶ್ರೀಗಂಧ ಕಳವು ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಮಾನ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಳಿಕ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ LPC ಅಸಾಮಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕುಂಡಾಪು ನಿವಾಸಿ  ತಂದೆ: S A ಮೊಯಿದ್ದಿನ್ ಕುಂಞ ಮಗನಾದ ಎಸ್.ಎ.ಅಶ್ರಪ್ (19/1996) ಎಂಬಾತನನ್ನು  ಉಪಾಧೀಕ್ಷಕರು ಬಂಟ್ವಾಳರವರ ಮಾರ್ಗದರ್ಶನದಲ್ಲಿ  ಬೆಳ್ತಂಗಡಿ   ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ   ಉಪನಿರೀಕ್ಷಕರರಾದ ಧನರಾಜ್.ಟಿ.ಎಮ್ ಹಾಗೂ ಚಂದ್ರಶೇಖರ್ ರವರ ನೇತ್ರತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಗಳಾದ ಬೆನ್ನಿಚ್ಚನ್, ಗಂಗಾಧರ್ ,ಆಶೋಕ್ ರವರು  ಆಗಸ್ಟ್ 24 ರಂದು ಕೇರಳ ಪೊಲೀಸರ ಸಹಕಾರದೊಂದಿಗೆ ಕೇರಳದಿಂದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದಂತೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಆರೋಪಿ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ LPC No. 125/2004 ಕಲಂ 279,304(A)ರಂತೆ ಹಾಗೂ ಉಪ್ಪಿನಂಗಡಿ ಮತ್ತು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಕಾಯಿದೆಯಡಿ  ದಾಖಲಾಗಿರುವ LPC ಪ್ರಕರಣ ವಿಚಾರಣೆಗೆ ಬಾಕಿ ಇರುತ್ತದೆ.

- Advertisement -

Latest News

error: Content is protected !!