Sunday, June 7, 2026
Homeಕರಾವಳಿವಿಟ್ಲ: ಕಾರು ಹಾಗೂ ಬೈಕ್ ನಡುವೆ ಅಪಘಾತ; ಸವಾರನಿಗೆ ಗಂಭೀರ ಗಾಯ

ವಿಟ್ಲ: ಕಾರು ಹಾಗೂ ಬೈಕ್ ನಡುವೆ ಅಪಘಾತ; ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ವಿಟ್ಲ:  ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೊಡಂಗಾಯಿ ಮೈತ್ರೇಯಿ ಗುರುಕುಲದ ಬಳಿ ನಡೆದಿದೆ.

ಕಡಂಬು ನಿವಾಸಿಗಳಾದ ಸಿನಾನ್ ಮತ್ತು ಫೈಜಲ್ ಗಾಯಗೊಂಡ ಬೈಕ್ ಸವಾರರು . ಇನ್ನು ವಾಹನಗಳ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೊಬ್ಬನ ತಲೆ ಕಾರಿನ ಗಾಜಿಗೆ ತಾಗಿ ಗಾಜು ಪುಡಿಪುಡಿಯಾಗಿ ಗಂಭೀರ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರು ಚಾಲಕ ಸುಳ್ಯ ಸಮೀಪದ ಕನಕಮಜಲು ನಿವಾಸಿ ಗೋಪಾಲಕೃಷ್ಣ ಎಂದು ಗುರುತಿಸಲಾಗಿದ್ದು, ತನ್ನ ಪುತ್ರಿಯನ್ನು ಮುಡಿಪು ನವೋದಯ ವಸತಿ ಶಾಲೆಗೆ ದಾಖಲಿಸಿ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ .

ಘಟನಾ ಸ್ಥಳಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!