Friday, May 3, 2024
Homeಕರಾವಳಿಧರ್ಮಸ್ಥಳ : ಮೂರು ವಾಹನಗಳಲ್ಲಿ ಅಕ್ರಮ ದನ ಸಾಗಾಟ ಪತ್ತೆ; 8 ಜಾನುವಾರು ರಕ್ಷಣೆ ,...

ಧರ್ಮಸ್ಥಳ : ಮೂರು ವಾಹನಗಳಲ್ಲಿ ಅಕ್ರಮ ದನ ಸಾಗಾಟ ಪತ್ತೆ; 8 ಜಾನುವಾರು ರಕ್ಷಣೆ , 4 ಜನರ ಆರೋಪಿಗಳ ಬಂಧನ; ಬೆಳ್ತಂಗಡಿ ಬಿಜೆಪಿ ಮುಖಂಡರಿಗೆ ಸೇರಿದ ವಾಹನಗಳು

spot_img
- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಮೂರು ವಾಹನಗಳಲ್ಲಿ ಹಿಂಸ್ಮಾಕ ರೀತಿಯಲ್ಲಿ ಏಂಟು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

*ಪ್ರಕರಣದ ಸಾರಾಂಶ:* ಜುಲೈ 12 ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲಕುಮಾರ್‌ ಡಿ  ರವರಿಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಸುಮಾರು 8:45 ಗಂಟೆಗೆ ಉಜಿರೆ  ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್‌ ವಾಹನಗಳಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ರಮಾನಂದ ಸಾಲ್ಯಾನ್‌ ಸೇರಿದ ಪಿಕಪ್ ವಾಹನ KA-21B-7389 ಮತ್ತು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಪ್ರಮೋದ್ ಸಾಲ್ಯಾನ್ ಸೇರಿದ ಪಿಕಪ್ ವಾಹನ KA-70-0312 ಹಾಗೂ ಕೃಷ್ಣ ಎಂಬವರಿಗೆ ಸೇರಿದ  KA670209 ನೇ ನೋಂದಣಿ ಸಂಖ್ಯೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದ್ರಿ ವಾಹನದಲ್ಲಿ ಕಪ್ಪು ಮತ್ತು ಕಂದು ಬಣ್ಣದ  ದನ -3, ಬಿಳಿ ಬಣ್ಣದಲ್ಲಿ ಕಂದು ಮಿಶ್ರಿತ ಇರುವ ದನ-1 , ಕಂದು ಬಣ್ಣದ ದನ -2 , ಕಂದು ಬಣ್ಣದ 2 ಗಂಡು ಕರುಗಳು ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ವಾಹನದಲ್ಲಿದ್ದ 1ನೇ ಆರೋಪಿ ಚೆನ್ನಕೇಶವ ಎಂಬತನನ್ನು ವಿಚಾರಿಸಿದಲ್ಲಿ ಇಂದಬೆಟ್ಟು ಮತ್ತು ನಾವೂರು ಪರಿಸರದಿಂದ ಜಾನುವಾರುಗಳನ್ನು ಖರೀದಿಸಿ ಹಾಸನ ಕಡೆಗೆ ಮಾರಾಟ ಮಾಡಲು ಮೂರು ವಾಹನಗಳಲ್ಲಿ  ಹಿಂಸಾತ್ಮಕವಾಗಿ ಜಾನುವಾರುಗಳನ್ನು  ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ವಾಹನಗಳ ಸಹಿತ ಜಾನುವಾರುಗಳನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

*ಪ್ರಕರಣದಲ್ಲಿ ಬಿಜೆಪಿ ಮುಖಂಡರು ಭಾಗಿ..?:* ಇನ್ನೂ ಈ ಅಕ್ರಮ ಜಾನುವಾರು ಸಾಗಾಟದ ಹಿಂದೆ ಬಿಜೆಪಿ ಮುಖಂಡರ ನೇತೃತ್ವದ ಇರುವ ಬಗ್ಗೆ ಅನುಮಾನ ಇದ್ದು. ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನಗಳು ನಾವೂರು ಬಿಜೆಪಿ ಮುಖಂಡರಿಗೆ ಸೇರಿದ್ದು. ತಾಲೂಕಿನಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡಿಸುವ ನಾವೂರಿನ ಬಿಜೆಪಿ ಮುಖಂಡರ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.ಅದಲ್ಲದೆ ಈ ಪ್ರಕರಣದಲ್ಲಿ ಹಲವು ಜನ ಆರೋಪಿಗಳು ಇದ್ದಾರೆ ಎನ್ನಲಾಗಿದೆ.

*ಬಂಧಿತ ಆರೋಪಿಗಳು:* 1) ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮರವಳಲು ನಿವಾಸಿ
ಬೇಲೂರಯ್ಯಮ ಮಗನಾದ ಚೆನ್ನಕೇಶವ(33) , 2)ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಒಳಗದ್ದೆ ನಿವಾಸಿ ಉಮೇಶ್ ಗೌಡರ ಮಗ ಪುಷ್ಪರಾಜ್(20) ,3) ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಆನಂದ ಬಂಗೇರ ಮಗನಾದ ಪ್ರಮೋದ್ ಸಾಲ್ಯಾನ್(49), ಹೊಳೆನರಸೀಪುರ ತಾಲೂಕಿನ ಹಳೇಕೋಟೆ ನಿವಾಸಿ ವೀರಭದ್ರಯ್ಯ ಮಗನಾದ ಸಂದೀಪ್‌(27) ಬಂಧಿತ ಆರೋಪಿಗಳು.

*ವಶಪಡಿಸಿಕೊಂಡ ಸಾಮಗ್ರಿಗಳು:* ಜಾನುವಾರುಗಳ ಅಂದಾಜು ಮೌಲ್ಯ 65,000 ಸಾವಿರ ಹಾಗೂ ವಾಹನದ ಅಂದಾಜು ಮೌಲ್ಯ 7,00,000 ರೂಪಾಯಿ ಆಗಬಹುದು. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 7,65,000 ರೂಪಾಯಿ ಅಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 8,9,11 ಕರ್ನಾಟಕ ಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಮತ್ತು ಕಲಂ: 11 (ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆ ಜೊತೆಗೆ ಕಲಂ:66 ಜೊತೆಗೆ 192(ಎ) ಐ ಎಂ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!