Thursday, June 4, 2026
Homeಅಪರಾಧಕರಾವಳಿಯಲ್ಲಿ ಸದ್ದು ಮಾಡುತ್ತಿರುವ ಭಯೋತ್ಪಾದನಾ ಚಟುವಟಿಕೆ: ಭಟ್ಕಳದ ಎರಡು ಕಡೆಗಳಲ್ಲಿ ಎನ್ಐಎ ದಾಳಿ

ಕರಾವಳಿಯಲ್ಲಿ ಸದ್ದು ಮಾಡುತ್ತಿರುವ ಭಯೋತ್ಪಾದನಾ ಚಟುವಟಿಕೆ: ಭಟ್ಕಳದ ಎರಡು ಕಡೆಗಳಲ್ಲಿ ಎನ್ಐಎ ದಾಳಿ

- Advertisement -
- Advertisement -

ಕಾರವಾರ: ದೇಶ ವಿರೋಧಿ ಹಾಗು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಭಟ್ಕಳದಲ್ಲಿ ಮತ್ತೆ ಎನ್ಐಎ ತಂಡ ದಾಳಿ ನಡೆಸಿದೆ.

ಭಟ್ಕಳದ ಉಮರ್‌ ಸ್ಟ್ರೀಟ್ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ದಾಳಿ ನಡೆದಿದೆ. ಹಾಗೆಯೆ ಎನ್‌ಐಎ ತಂಡ ಶಂಕಿತ ಮೂವರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಇಂದು ಬಂಧನಕ್ಕೊಳಕ್ಕಾಗಿರುವ ಮೂವರಲ್ಲಿ ಒಬ್ಬಾತನ ಸಹೋದರ ಈಗಾಗಲೇ ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ ಬಂಧಿಸಲಾಗಿದೆ ಎನ್ನಲಾಗುತ್ತಿದೆ.

ಎನ್ಐಎ ಕಾರ್ಯಾಚರಣೆಗೆ ಹೊರಗಿನಿಂದ ಭದ್ರತೆಗೆ ರಾಜ್ಯ ಪೊಲೀಸ್ ಇಲಾಖೆಯ ತಂಡವನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

- Advertisement -

Latest News

error: Content is protected !!