Friday, June 5, 2026
Homeಕರಾವಳಿಬೆಳ್ತಂಗಡಿ: ಉದ್ಯಮಿ ಬರೋಡ ಶಶಿಧರ ಶೆಟ್ಟಿಯವರ ಹುಟ್ಟುಹಬ್ಬ ಗುಂಡೂರಿ ಸೇವಾಶ್ರಮದಲ್ಲಿ ಆಚರಣೆ

ಬೆಳ್ತಂಗಡಿ: ಉದ್ಯಮಿ ಬರೋಡ ಶಶಿಧರ ಶೆಟ್ಟಿಯವರ ಹುಟ್ಟುಹಬ್ಬ ಗುಂಡೂರಿ ಸೇವಾಶ್ರಮದಲ್ಲಿ ಆಚರಣೆ

- Advertisement -
- Advertisement -

ಬೆಳ್ತಂಗಡಿ: ದೇಶಾದ್ಯಂತ ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸಿಕೊಟ್ಟ ಖ್ಯಾತ ಉದ್ಯಮಿಗಳು,ಸಮಾಜ ಸೇವಕರು,ಬರೋಡ ತುಳು ಸಂಘದ ಅಧ್ಯಕ್ಷರು ಆದ ಬೆಳ್ತಂಗಡಿ ಮೂಲದ ಶಶಿಧರ ಶೆಟ್ಟಿಯವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳಿಂದ ತಾಲೂಕಿನ ಗುಂಡೂರಿ ಸೇವಾಶ್ರಮದಲ್ಲಿ ಆಚರಿಸಲಾಯಿತು.


ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಬಂಧುಗಳಿಗೆ ಸಿಹಿತಿಂಡಿ ,ಹಣ್ಣುಹಂಪಲು ಮತ್ತು ಹೊಸ ಬಟ್ಟೆಗಳನ್ನು ವಿತರಿಸಲಾಯಿತು.


ಈ ಸಂಧರ್ಭದಲ್ಲಿ ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ,ಲಾಯಿಲ ಗ್ರಾ.ಪಂ.ಉಪಾಧ್ಯಕ್ಷರಾದ ಗಣೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಶರತ್ ಕುಮಾರ್,ಗುತ್ತಿಗೆದಾರರಾದ ಪ್ರತೀಶ್ ಪೂಜಾರಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!