Saturday, June 6, 2026
Homeಕರಾವಳಿಮಾಣಿ ಗ್ರಾಮ ಪಂಚಾಯತ್; ಆಗಸ್ಟ್ ತಿಂಗಳ ಮಾಸಿಕ ಸಭೆ

ಮಾಣಿ ಗ್ರಾಮ ಪಂಚಾಯತ್; ಆಗಸ್ಟ್ ತಿಂಗಳ ಮಾಸಿಕ ಸಭೆ

- Advertisement -
- Advertisement -

ಮಾಣಿ : ಗ್ರಾಮದ ಅಭಿವೃದ್ಧಿಯ ಜೊತೆಗೆ ಕೊರೋನ ನಿರ್ವಹಣೆ, ಕೋವಿಡ್ ಲಸಿಕೆಯ ವಿಚಾರದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆ ಹೇಳಿದರು.


ಆಗಸ್ಟ್ ತಿಂಗಳ ಪಂಚಾಯತ್ ನ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಗುರುತಿಸುವ ರೀತಿಯಲ್ಲಿ ಸಾವಿರದ ನೂರು ಡೋಸ್ ಗಳ ಕೋವಿಡ್ ಲಸಿಕಾ ಶಿಬಿರವನ್ನು ಗ್ರಾಮ ಪಂಚಾಯತ್ ವತಿಯಿಂದ ಬೆಂಗಳೂರಿನ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸಹಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಗಿದೆ. ಗ್ರಾಮ ಪಂಚಾಯತ್ ಕಛೇರಿಗೆ ಅಧಿಕೃತ ಭೇಟಿ ನೀಡಿದ ಎಸ್ ಐ ಆರ್ ಡಿ ನಿರ್ದೇಶಕಿ ಗಾಯತ್ರಿಯವರು, ಪಂಚಾಯತ್ ಕಾರ್ಯವೈಖರಿಯ ಬಗ್ಗೆ ಕಡತಗಳನ್ನು ಪರೀಶೀಲಿಸಿ ಅತೀವವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

- Advertisement -

Latest News

error: Content is protected !!