Saturday, October 17, 2026
Homeತಾಜಾ ಸುದ್ದಿಕಾಶಿ ತಲುಪಿದ ಮೊದಲ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲು; ಬನಾರಸ್ ನಲ್ಲಿ ಯಾತ್ರಾರ್ಥಿಗಳಿಗೆ...

ಕಾಶಿ ತಲುಪಿದ ಮೊದಲ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲು; ಬನಾರಸ್ ನಲ್ಲಿ ಯಾತ್ರಾರ್ಥಿಗಳಿಗೆ ಸ್ವಾಗತ ಕೋರಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ

- Advertisement -
- Advertisement -

ವಾರಣಾಸಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿನ ಮೊದಲ ಟ್ರಿಪ್ ನ ಯಾತ್ರಾರ್ಥಿಗಳನ್ನು ಕರೆದೊಯ್ದ ರೈಲು ಇಂದು ವಾರಣಾಸಿಗೆ ತಲುಪಿದೆ.

ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಬನಾರಸ್ ರೈಲು ನಿಲ್ದಾಣದಲ್ಲಿ ಯಾತ್ರಾರ್ಥಿಗಳಿಗೆ ಆತ್ಮೀಯ ಸ್ವಾಗತವನ್ನು ಕೋರಿದರು.

ಪ್ರಥಮ ಟ್ರಿಪ್ ನ ಯಾತ್ರಾರ್ಥಿಗಳು ತಮ್ಮನ್ನು ಸ್ವಾಗತಿಸಲು ಆಗಮಿಸಿದ್ದ ಸಚಿವರನ್ನು ಕಂಡು ಸಂತಸಗೊಂಡರು.

ಎರಡು ದಿನಗಳ ಕಾಲ ವಾರಣಾಸಿಯಲ್ಲಿ ವಾಸ್ತವ್ಯ ಹೂಡಲಿರುವ ಯಾತ್ರಾರ್ಥಿಗಳು ನಂತರ ಪ್ರಯಾಗರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಿ ನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ.‌

ನವೆಂಬರ್ 11 ರಂದು ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಶಿ ದರ್ಶನ ವಿಶೇಷ ರೈಲಿಗೆ ಚಾಲನೆ ನೀಡಿದ್ದರು.

- Advertisement -

Latest News

error: Content is protected !!