Thursday, June 4, 2026
Homeತಾಜಾ ಸುದ್ದಿಪೊಲೀಸ್ ಸಿಬ್ಬಂದಿಗೆ ಸಾಮೂಹಿಕವಾಗಿ ಕಾಂತಾರ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಎಸ್ಪಿ ಹರಿರಾಂ ಶಂಕರ್

ಪೊಲೀಸ್ ಸಿಬ್ಬಂದಿಗೆ ಸಾಮೂಹಿಕವಾಗಿ ಕಾಂತಾರ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಎಸ್ಪಿ ಹರಿರಾಂ ಶಂಕರ್

- Advertisement -
- Advertisement -

ಹಾಸನ: ಕಾಂತಾರಾ ಕನ್ನಡ ಚಲನಚಿತ್ರವನ್ನು ಕುಟುಂಬ ಸದಸ್ಯರ ಜೊತೆ ಸಾಮೂಹಿಕ ವಾಗಿ ಹಾಸನದ ಪೊಲೀಸ್ ಸಿಬ್ಬಂದಿ ವೀಕ್ಷಿಸಿದ್ದಾರೆ.

ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಅವರ ಕುಟುಂಬಕ್ಕೆ ಕಾಂತಾರ ಸಿನಿಮಾ ವೀಕ್ಷಣೆಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ವ್ಯವಸ್ಥೆ ಮಾಡಿದ್ದರು.

ಹಾಸನದ ಎಸ್‌ಬಿಜಿ ಚಿತ್ರಮಂದಿರಲ್ಲಿ ಕಾಂತಾರ ಸಿನಿಮಾವನ್ನು ನಿನ್ನೆ ಸಂಜೆ ಸಾಮೂಹಿಕವಾಗಿ ಸುಮಾರು 210 ಮಂದಿ ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರು ವೀಕ್ಷಣೆ ಮಾಡಿದ್ದಾರೆ.

ಪೊಲೀಸ್ ಸಿಬ್ಬಂದಿಗಳ ಜೊತೆ ಕುಳಿತು ಎಸ್ಪಿ ಹರಿರಾಂ ಶಂಕರ್ ಮತ್ತು ಎಎಸ್‌ಪಿ ತಮ್ಮಯ್ಯ ಕೂಡಾ ವೀಕ್ಷಿಸಿದ್ದರು.

ಕಾಂತಾರಾ ಸಿನಿಮಾ ಬಿಡುಗಡೆ ಯಾದ ಸಂದರ್ಭದಲ್ಲಿ ಸತತ ಕರ್ತವ್ಯಗಳ ಹಿನ್ನೆಲೆಯಲ್ಲಿ ಪೊಲೀಸರು ಬ್ಯುಸಿಯಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ವೀಕ್ಷಣೆಗೆ ಹಾಸನ ಎಸ್ಪಿ ಅವಕಾಶ ಕಲ್ಪಿಸಿದ್ದರು.

ಹಾಸನ ಎಸ್ಪಿಯಾಗುವ ಮೊದಲು ಹರಿರಾಂ ಶಂಕರ್ ಮಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು.

- Advertisement -

Latest News

error: Content is protected !!