Sunday, June 7, 2026
Homeತಾಜಾ ಸುದ್ದಿಐಎಎಸ್ ಅಧಿಕಾರಿ, ಐಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿ ವಿಜಯಶಂಕರ್ ಆತ್ಮಹತ್ಯೆ!

ಐಎಎಸ್ ಅಧಿಕಾರಿ, ಐಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿ ವಿಜಯಶಂಕರ್ ಆತ್ಮಹತ್ಯೆ!

- Advertisement -
- Advertisement -

ಬೆಂಗಳೂರು: ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಹಾಗೂ ಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಜಯಶಂಕರ್ ಇಂದು ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐಎಂಎ ಕಂಪನಿಯಿಂದ ಒಂದೂವರೆ ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ತನಿಖಾ ತಂಡ ಕಳೆದ ವರ್ಷ ಜುಲೈ 8ರಂದು ಬಂಧಿಸಿತ್ತು. ನಂತರ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ವಿಜಯಶಂಕರ್ ಅವರನ್ನು ಇರಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.

- Advertisement -

Latest News

error: Content is protected !!