Sunday, May 19, 2024
Homeತಾಜಾ ಸುದ್ದಿಮಹಾರಾಷ್ಟ್ರದಲ್ಲಿ ಲಘು ಭೂಕಂಪನ: 3.3 ತೀವ್ರತೆ ದಾಖಲು

ಮಹಾರಾಷ್ಟ್ರದಲ್ಲಿ ಲಘು ಭೂಕಂಪನ: 3.3 ತೀವ್ರತೆ ದಾಖಲು

spot_img
- Advertisement -
- Advertisement -

ಅಂಕೋಲಾ: ಮಹಾರಾಷ್ಟ್ರ ರಾಜ್ಯದ ಅಂಕೋಲ ಜಿಲ್ಲೆಯಲ್ಲಿ ಭೂಕಂಪನವಾಗಿದ್ದು, ಸಂಜೆ 5:30 ರ ಸುಮಾರಿಗೆ ಭೂಮಿ ನಡುಗಿದೆ. ಅಂಕೋಲಾ ಜಿಲ್ಲಾ ಕೇಂದ್ರದಿಂದ 129 ಕಿ,ಮೀ ದೂರದಲ್ಲಿ ಕಂಪನವಾಗಿದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಭೂಕಂಪನ ಶಾಸ್ತ್ರ ಇದನ್ನು ಖಚಿತಪಡಿಸಿದ್ದು, 3.3 ರಷ್ಟು ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಮಿ ಕಂಪಿಸಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈಗಾಗಲೇ ಮಹಾರಾಷ್ಟ್ರದ ಜನ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ, ಇದರ ನಡುವೆ ಜನತೆಗೆ ಭೂಕಂಪನದ ಶಾಕ್ ಎದುರಾಗಿದೆ. ಸೋಮವಾರವಷ್ಟೇ ಒಡಿಶಾ ಹಾಗೂ ಛತ್ತೀಸ್ ಗಢದಲ್ಲಿ ಭೂಮಿ ಕಂಪಿಸಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಭೂಮಿ ಕಂಪಿಸಿದೆ.

- Advertisement -
spot_img

Latest News

error: Content is protected !!