Saturday, June 27, 2026
Homeಕರಾವಳಿಬೆಳ್ತಂಗಡಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಮಾಲಾಡಿ ಗ್ರಾ.ಪಂ PDO ಎಸಿಬಿ ಬಲೆಗೆ

ಬೆಳ್ತಂಗಡಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಮಾಲಾಡಿ ಗ್ರಾ.ಪಂ PDO ಎಸಿಬಿ ಬಲೆಗೆ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಭ್ರಷ್ಟ ಪಿಡಿಓ 15,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮಾಲಾಡಿ ಗ್ರಾಮ ಪಂಚಾಯತ್ ಪಿಡಿಓ ರವಿ ತನ್ನ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಅಗಿ ಸೆರೆ ಸಿಕ್ಕಿದ್ದಾರೆ.

ಗ್ರಾಮಸ್ಥರೊಬ್ಬರಿಂದ ಜಾಗದ 9/11 ಮಾಡಲು ಪಿಡಿಓ ರವಿ 15,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದ‌.ಕ‌.ಭ್ರಷ್ಟಾಚಾರ ನಿಗ್ರಹ ದಳ ಇನ್ಸ್ಪೆಕ್ಟರ್ ಗುರುರಾಜ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಗ್ರಾಮ ಪಂಚಾಯತ್ ಪಿಡಿಓ ರವಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಿಂದೆ ಮಂಗಳೂರು ನಗರದಲ್ಲಿ ಸೆಕ್ರೆಟರಿ ಅಗಿ ಕರ್ತವ್ಯದಲ್ಲಿದ್ದ ರವಿ, ಒಂದುವರೆ ತಿಂಗಳ ಹಿಂದೆ ಪಿಡಿಓ ಅಗಿ ಭಡ್ತಿ ಹೊಂದಿ ಮಾಲಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!