Monday, May 20, 2024
HomeWorld2021 ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ 21 ವರ್ಷದ ಹರ್ನಾಜ್ ಸಂಧು !

2021 ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ 21 ವರ್ಷದ ಹರ್ನಾಜ್ ಸಂಧು !

spot_img
- Advertisement -
- Advertisement -

ಚಂಡೀಗಡ್ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯುನಿವರ್ಸ್ ಕಿರೀಟ ಒಲಿಸಿಕೊಂಡಿದ್ದಾರೆ. ಚಂಡೀಗಢದ ಸ್ನಾತಕೋತ್ತರ ಸರ್ಕಾರಿ ಕಾಲೇಜು ಸೆಕ್ಟರ್ 11 ರ ಹಳೆಯ ವಿದ್ಯಾರ್ಥಿ ಮತ್ತು ಪಂಜಾಬಿ ಚಲನಚಿತ್ರ ನಟಿ ಹರ್ನಾಜ್ ಸಂಧು ಅವರು ವಿಶ್ವ ಸುಂದರಿ 2021 ಪಟ್ಟ ಸ್ವೀಕರಿಸಿದ್ದಾರೆ.

ಲಾರಾ ದತ್ತಾ 2000 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಬಳಿಕ 21 ವರ್ಷಗಳ ನಂತರ ಕಿರೀಟವನ್ನು ಹರ್ನಾಜ್ ಸಂಧು ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯ ಮೊದಲು, 21 ವರ್ಷದ ಮಾಡೆಲ್ ಹರ್ನಾಜ್ ಸಂಧು ಹೇಳಿದ್ದು ಹೀಗೆ “ಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಂದಾಗ ಪ್ರತಿಭೆ ಮುಖ್ಯವಾಗಿದೆ. ಮೇಕಪ್ ನಿಮ್ಮ ಸೌಂದರ್ಯವನ್ನು ಮಾತ್ರ ಹೆಚ್ಚಿಸುತ್ತದೆ. ನಿಮ್ಮ ಉತ್ಸಾಹವು ಅತ್ಯಂತ ಮುಖ್ಯವಾದುದು.” ಎಂದರು.

ಮೊದಲ ರನ್ನರ್ ಅಪ್ ಆಗಿ ಪರಾಗ್ವೆ ದೇಶದ 22 ವರ್ಷದ ನಾದಿಯಾ ಫೆರಾರ ಹಾಗೂ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್ ಅವರನ್ನು ಆಯ್ಕೆಯಾದರು.

ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ತನ್ನ ಸಹ ಸ್ಪರ್ಧಿಗಳನ್ನು ಸೋಲಿಸುವ ಮೂಲಕ ಅವರು ಪ್ರಶಸ್ತಿಯನ್ನು ಪಡೆದರು.
ಹರ್ನಾಜ್ ಅವರು ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ 2017, ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ 2018 ಮತ್ತು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ನಂತಹ ಹಲವಾರು ಸ್ಪರ್ಧೆಯಲ್ಲಿ ಮಿಂಚಿದ್ದಾರೆ.
ಅವರು ‘ಯಾರಾ ದಿಯಾನ್ ಪೂ ಬರನ್’ ಮತ್ತು ‘ಬಾಯಿ ಜಿ ಕುಟ್ಟಂಗೆ’ ಮುಂತಾದ ಪಂಜಾಬಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

- Advertisement -
spot_img

Latest News

error: Content is protected !!