Friday, April 19, 2024
Homeಕರಾವಳಿಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ನೀಡಿದ ಬೆಳ್ತಂಗಡಿಯ ಖ್ಯಾತ ನೋಟರಿ ವಕೀಲ ಮುರಳಿ

ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ನೀಡಿದ ಬೆಳ್ತಂಗಡಿಯ ಖ್ಯಾತ ನೋಟರಿ ವಕೀಲ ಮುರಳಿ

spot_img
- Advertisement -
- Advertisement -

ಬೆಳ್ತಂಗಡಿ: ಲಾಕ್‌ಡೌನ್ ನಿಂದಾಗಿ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಹೀಗೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ 70ಕ್ಕೂ ಅಧಿಕ ಮಂದಿ ಕೊರೊನಾ ವಾರಿಯರ್ಸ್ ಹಾಗೂ ಬಡ ಕುಟುಂಬಗಳಿಗೆ ಖ್ಯಾತ ನೋಟರಿ ನ್ಯಾಯವಾದಿ ಮುರಳಿ ಬಿ ರವರ ಸುಮಾರು ಕಳೆದ ಮೂರು ದಿನದಿಂದ ಊಟೋಪಚಾರ ಹಾಗೂ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಸಂಘಟನೆಗಳಲ್ಲಿ ಪ್ರಮುಖರಾಗಿರುವ ರಾಮ್ ಪ್ರಸಾದ್ ಆಚಾರ್ಯ ಗುಂಪಲಾಜೆಯವರ ಮನವಿಯಂತೆ ಓಡಿಲ್ನಾಳ ಗ್ರಾಮದ ಪಣೆಜಾಲು ರಾಜು ಶೆಟ್ಟಿ ಯವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬಕ್ಕೆ ಹಾಗೂ ಬೆಳ್ತಂಗಡಿ ಕಸಬಾ ಗ್ರಾಮದ ಭುಜಂಗ ಆಚಾರ್ಯ ಸೇರಿದಂತೆ ಸಂಕಷ್ಟದಲ್ಲಿರುವ ವಿವಿಧ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳಿರುವ ಕಿಟ್ಟನ್ನು  ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅವರ ಮಕ್ಕಳಾದ ಬಿ.ಎಮ್ ಮಂದಾರ, ಬಿ.ಎಮ್ ಮಯೂರ್, ಸ್ಥಳೀಯರಾದ ರಾಮ ಪ್ರಸಾದ್ಆಚಾರ್ಯ, ಶಂಕರ್ ಸಪಲಿಗ ಉಪಸ್ಥಿತರಿದ್ದು, ಕಿಟ್ ಹಸ್ತಾಂತರಿಸುವಲ್ಲಿ ಸಹಕರಿಸಿದರು.

ಮೇಲಂತಬೆಟ್ಟು ಪಂಚಾಯತ್  ಹಾಗೂ ಸವಣಾಲು ಗ್ರಾಮದಲ್ಲಿ 13 ಕುಟುಂಬಕ್ಕೆ ಸುಮಾರು 15 ದಿನಗಳಿಗೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಮುರುಳಿ.ಬಿ ಮತ್ತು ಮಕ್ಕಳು ನೀಡಿದರು. ಈ ವೇಳೆ ಕಾರ್ಯದರ್ಶಿಗಳಾದ ನಿರ್ಮಲ್ ಕುಮಾರ್ ಹಾಗೂ ಅಧ್ಯಕ್ಷರಾದ ಹರಿಣಾಕ್ಷಿ ಮತ್ತು ಸದಸ್ಯರಾದ ದೀಪಿಕಾ,ಜಯಲಕ್ಷ್ಮಿ,ಚಂದ್ರರಾಜ್,ಲೋಕನಾಥ್,ಚಂದ್ರಶೇಖರ ಉಪಸ್ಥಿತಿ ಇದ್ದರು.

ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ 18 ಸ್ಟೀಮ್ ಮೇಷಿನ್ ಕೊಡುಗೆಯಾಗಿ ನೀಡಿದ್ದಾರೆ. ನಾಳೆ ಬೆಳ್ತಂಗಡಿ ನಗರ ಪಂಚಾಯತಿನ 20 ಪೌರ ಕಾರ್ಮಿಕರಿಗೆ ಸ್ಟೀಮ್ ಮೇಷಿನ್ ಉಚಿತವಾಗಿ ನೀಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹಲವು ಬಡಕುಟುಂಬಕ್ಕೆ ಊಟೋಪಚಾರ,  ದಿನಸಿ ಸಾಮಾಗ್ರಿ ಜೊತೆ ಮನೆ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಕೂಡ ಮುರುಳಿ.ಬಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!