Monday, October 12, 2026
Homeಕರಾವಳಿಉಪ್ಪಿನಂಗಡಿ: ವಿದ್ಯುತ್ ಅವಘಡ ಸಂಭವಿಸಿ ಮೆಸ್ಕಾಂ ಉದ್ಯೋಗಿ ಸಾವು

ಉಪ್ಪಿನಂಗಡಿ: ವಿದ್ಯುತ್ ಅವಘಡ ಸಂಭವಿಸಿ ಮೆಸ್ಕಾಂ ಉದ್ಯೋಗಿ ಸಾವು

- Advertisement -
- Advertisement -

ಉಪ್ಪಿನಂಗಡಿ: ದಿನವಿಡೀ ಸುರಿಯುತ್ತಿದ್ದ ತುಂತುರು ಮಳೆಗೆ ಉಪ್ಪಿನಂಗಡಿ ಸಮೀಪದ ತೆಕ್ಕಾರುನ ಪಿಂಡಿಕಲ್ಲು ಎಂಬಲ್ಲಿ ವಿದ್ಯುತ್ ಸಂಪರ್ಕದ ಲೋಪವನ್ನು ಸರಿಪಡಿಸಲು ಹೋಗಿದ್ದ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ (26) ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ಇಂದು ಸಂಜೆ ಸಂಭವಿಸಿದೆ.

ಮೃತ ವಿಕಾಸ್ ಮೂಲತಃ ಬಿಜಾಪುರದವರಾಗಿದ್ದು, ಕಳೆದ 5 ವರ್ಷಗಳಿಂದ ಮೆಸ್ಕಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿವಾಹಿತರಾಗಿದ್ದು ಒಂದುವರೆ ವರ್ಷ ಪ್ರಾಯದ ಮಗುವಿದೆ.

- Advertisement -

Latest News

error: Content is protected !!