Sunday, May 5, 2024
Homeಕರಾವಳಿಅವ್ಯವಸ್ಥೆಯ ಆಗರವಾಗಿದೆ ಬೆಳ್ತಂಗಡಿಯ ಸಮುದಾಯ ಆರೋಗ್ಯ ಕೇಂದ್ರ: ಕೊರೊನಾ ನಿಯಮಗಳನ್ನೇ...

ಅವ್ಯವಸ್ಥೆಯ ಆಗರವಾಗಿದೆ ಬೆಳ್ತಂಗಡಿಯ ಸಮುದಾಯ ಆರೋಗ್ಯ ಕೇಂದ್ರ: ಕೊರೊನಾ ನಿಯಮಗಳನ್ನೇ ಮರೆತ ಸಿಬ್ಬಂದಿ

spot_img
- Advertisement -
- Advertisement -

ಬೆಳ್ತಂಗಡಿ: ಜನ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋದಕ್ಕೆ ಅಂತಾ ಆಸ್ಪತ್ರೆಗಳತ್ತ  ಮುಖ ಮಾಡ್ತಾರೆ. ಆದ್ರೆ ಬೆಳ್ತಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದ್ರೆ ಕೊರೊನಾ ಉಚಿತ ಎಂಬಂತಾಗಿದೆ.

ಇನ್ನು ವ್ಯಾಕ್ಸಿನ್  ಹಾಕಿಸಿಕೊಳ್ಳೋಕೆ ಬಂದವರಿಗೆ ಕೊರೊನಾ ಪಕ್ಕಾ ಎಂಬಂತಾಗಿದೆ. ಗಾಳಿ ಬೆಳಕು ಇಲ್ಲದ ಕಡೆ 150ಕ್ಕೂ ಹೆಚ್ಚು ಜನರನ್ನು ಗಂಟೆಗಟ್ಟಲೇ ಕೂರಿಸಿದ್ದಾರೆ. ಅಲ್ಲದೇ ಮಧ್ಯಾಹ್ನವಾದ್ರೂ 50 ಜನರಿಗೂ ವ್ಯಾಕ್ಸಿನ್ ನೀಡೋದಕ್ಕೆ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಹಾಗಾಗಿ ಬಂದವರು ಹಿಡಿಶಾಪ ಹಾಕಿದ್ದಾರೆ.

ಇನ್ನು ಇಲ್ಲಿನ ಸಿಬ್ಬಂದಿಗೆ ವ್ಯಾಕ್ಸಿನ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಶೆಡ್ಯೂಲ್ ಫಿಕ್ಸ್ ಆಗದವರಿಗೂ ಟೋಕನ್ ಕೊಟ್ಟು ಗಂಟೆ ಗಂಟೆ ಕಾಯಿಸಿ ಮನೆಗೆ ಕಳುಹಿಸಿದ್ದಾರೆ. ಇವತ್ತು ಶೆಡ್ಯೂಲ್ ಫಿಕ್ಸ್ ಆಗಿದ್ದರೆ ಇವತ್ತೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಆದ್ರೆ ಅಂತಹವರನ್ನು ವಾಪಾಸ್ ಕಳುಹಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ನಡೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಬಂದವರು ಆಕ್ರೋಶ ಹೊರಹಾಕಿದ್ದಾರೆ.

- Advertisement -
spot_img

Latest News

error: Content is protected !!