Sunday, June 28, 2026
Homeತಾಜಾ ಸುದ್ದಿಬೆಳ್ತಂಗಡಿ: ಬಿಜೆಪಿ ಪಕ್ಷದ ಫ್ಲೆಕ್ಸ್ ನಲ್ಲಿ ಸರ್ಕಾರಿ ಉದ್ಯೋಗಿಯ ಫೋಟೋ, ದೂರು ದಾಖಲು

ಬೆಳ್ತಂಗಡಿ: ಬಿಜೆಪಿ ಪಕ್ಷದ ಫ್ಲೆಕ್ಸ್ ನಲ್ಲಿ ಸರ್ಕಾರಿ ಉದ್ಯೋಗಿಯ ಫೋಟೋ, ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿ ಮತ್ತು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕಜೆ ನಿವಾಸಿ ಹೇಮಲತಾ ಎಂಬವರು ಸ್ಥಳೀಯವಾಗಿ ಬಿಜೆಪಿಯ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕಳೆಂಜ ಗ್ರಾಮದ ಕಲ್ಲಲ್ತಿಮಜಲು ನಿವಾಸಿ ಗಿರೀಶ ಕೆ.ಎಂ ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೇಮಲತಾ, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೂ ಬಿಜೆಪಿ ಚಿಹ್ನೆ ಹೊಂದಿರುವ ಬ್ಯಾನರ್ ನಲ್ಲಿ ತನ್ನ ಹೆಸರು ಮತ್ತು ಫೋಟೋ ಪ್ರಕಟಿಸಿದ್ದಾರೆ. ಇದು ಸರಕಾರಿ ಸೇವಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ.

ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು ತಮ್ಮ ಕಚೇರಿಯಲ್ಲಿ ಸಹ ಪಕ್ಷಪಾತಿಯಾಗಿ ಕೆಲಸ ಮಾಡುವ ಸಂಶಯ ಇದೆ. ಹಾಗಾಗಿ ರಾಜಕೀಯ ಪಕ್ಷದ ಪರ ಕೆಲಸ ಮಾಡಿದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರ ಗಿರೀಶ್ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!