Saturday, June 6, 2026
Homeಕರಾವಳಿಕಾಸರಗೋಡು"ವಿಕಲಾಂಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ"- ಪ್ರಾಧ್ಯಾಪಕನ ಹೀನ ಕೃತ್ಯಕ್ಕೆ ವ್ಯಾಪಕ ಖಂಡನೆ

“ವಿಕಲಾಂಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ”- ಪ್ರಾಧ್ಯಾಪಕನ ಹೀನ ಕೃತ್ಯಕ್ಕೆ ವ್ಯಾಪಕ ಖಂಡನೆ

- Advertisement -
- Advertisement -

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ವಿಕಲಾಂಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. 2019ರ ಡಿಸೆಂಬರ್ ತಿಂಗಳಲ್ಲಿ ಕಾಲೇಜಿನಿಂದ ಪ್ರವಾಸ ಹೋಗಿದ್ದ ಸಮಯದಲ್ಲಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದಿತ್ತು. ಪ್ರಯಾಣದ ನಡುವೆಯೇ ಪ್ರಾಧ್ಯಪಕ ದೌರ್ಜನ್ಯ ಎಸಗಿದ್ದ. ತನ್ನ ಮೇಲೆ ಆದ ಕ್ರೌರ್ಯವನ್ನು ವಿದ್ಯಾರ್ಥಿನಿ ಸಹಪಾಠಿಗಳ ಜತೆ ಹೇಳಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಫರೂಕ್​ ಕಾಲೇಜಿನ ಮಲಯಾಳಂ ವಿಭಾಗದ ಸಹಾಯಕ ಪ್ರಾಧ್ಯಪಕ ಖಮರುದ್ದೀನ್​ ಬಂಧಿತ ಆರೋಪಿ. ಈತನನ್ನು ಬುಧವಾರ ಬಂಧಿಸಲಾಗಿದ್ದು, ಫರೂಕ್​ ಠಾಣಾ ಪೊಲೀಸರು ಮಾಹಿತಿ ಖಚಿತಪಡಿಸಿದ್ದಾರೆ.

ಪ್ರಕರಣ ಸಂಬಂಧ ಕಾಲೇಜಿನಲ್ಲಿ ದೂರು ನೀಡಲಾಗಿ ಕಾಲೇಜು ಆಡಳಿತ ಮಂಡಳಿ ಆರೋಪಿಯನ್ನು ಅಮಾನತ್ತು ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ ಕೇರಳ ಪೊಲೀಸರು ಆರೋಪಿ ಖಮರುದ್ದೀನ್​ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!