Sunday, June 14, 2026
Homeಕರಾವಳಿಬೆಳ್ತಂಗಡಿ ಕಾಲೇಜ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ

ಬೆಳ್ತಂಗಡಿ ಕಾಲೇಜ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ

- Advertisement -
- Advertisement -

ಬೆಳ್ತಂಗಡಿ : ಜ್ಯೂನಿಯರ್ ಕಾಲೇಜ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಇಂದು ಸುಖಾಂತ್ಯ ಕಂಡಿದೆ. ವಿದ್ಯಾರ್ಥಿನಿಯನ್ನು ಇಂದು ಬೆಳ್ತಂಗಡಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಡಿಗೆರೆ ನಿವಾಸಿ ಕಿಟ್ಟ ಎನ್ ರವರ ಪುತ್ರಿ ಸಿಂಧು ಕಾಲೇಜಿಗೆಂದು ಹೊರಟುಹೋದವರು, ಕಾಲೇಜಿಗೂ ಹೋಗದೆ ಇತ್ತ ಹಾಸ್ಟೆಲ್ ಗೂ ಮರಳಿ ಬಾರದೆ ನಾಪತ್ತೆಯಾಗಿದ್ದಳು.

ಬೆಳಿಗ್ಗೆ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿಗೆಂದು ಹೋಗಿದ್ದರು. ಆದರೆ ಸಂಜೆ 5. 00 ಗಂಟೆಯವರೆಗೂ ಈಕೆ ಮರಳಿ ಬಾರದೇ ಇದ್ದು, ಈಕೆ ನಾಪತ್ತೆಯಾಗಿರುವ ಕುರಿತು ಹಾಸ್ಟೆಲ್ ವಾರ್ಡನ್ ಶುಭಾ ನಾಯಕ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈಗ ವಿಧ್ಯಾರ್ಥಿ ಸಿಕ್ಕಿದ್ದಾಳೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

- Advertisement -

Latest News

error: Content is protected !!