Saturday, June 6, 2026
Homeಇತರಬಂಟ್ವಾಳ: ವಕೀಲರ ಕಚೇರಿಗೆ ಕಳ್ಳರು ನುಗ್ಗಿ ನಗದು ಕಳವು...!

ಬಂಟ್ವಾಳ: ವಕೀಲರ ಕಚೇರಿಗೆ ಕಳ್ಳರು ನುಗ್ಗಿ ನಗದು ಕಳವು…!

- Advertisement -
- Advertisement -

ಬಂಟ್ವಾಳ: ವಕೀಲರ ಕಚೇರಿಗೆ ಕಳ್ಳರು ನುಗ್ಗಿ ನಗದು ಕಳವು ಮಾಡಿದ ಘಟನೆ ಬಿ.ಸಿರೋಡಿನಲ್ಲಿ ನಡೆದಿದೆ.
ಎಂ ಸುದರ್ಶನ್ ಕುಮಾರ್ ಎಂಬವರ ಬಿ.ಸಿರೋಡ್ ನ ಶ್ರೀನಿವಾಸ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿರುವ ಕಚೇರಿಗೆ ರಾತ್ರಿ ಕಳ್ಳರು ನುಗ್ಗಿ ನಗದು ಕಳವು ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಕೀಲರು ಇಂದು ಬೆಳಿಗ್ಗೆ 8.45 ಗಂಟೆಗೆ ಕಛೇರಿಗೆ ಬಂದಾಗ ಯಾರೋ ಕಳ್ಳರು ಕಛೇರಿಯ ಒಂದು ಭಾಗದ ಶಟರಿನ ಬೀಗವನ್ನು ತುಂಡರಿಸಿ ನಂತರ ಕಛೇರಿಯಲ್ಲಿ ಇರುವ ಫ್ಯಾಬ್ರಿಕೇಶನ್ ಅನ್ನು ತುಂಡರಿಸಿ ಕಛೇರಿಯ ಒಳಗೆ ನುಗ್ಗಿ ಡ್ರವರ್ ನಲ್ಲಿ ಇದ್ದ ಅಂದಾಜು ರೂ.3000 ಹಣವನ್ನು ಕದ್ದುಕೊಂಡು ಹೋಗಿರುವುದು ಕಂಡು ಬಂದಿದೆ.

ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!