- Advertisement -
![]()
- Advertisement -
ಬೆಳ್ತಂಗಡಿ : ತಮಗೆ ಬೇಕಾದ ರೀತಿಯಲ್ಲಿ ಮಸೂದೆ ರೂಪಿಸಿಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುವ ಬಿಜೆಪಿಯ ಕುತಂತ್ರ ರಾಜಕಾರಣ ಮತ್ತೊಮ್ಮೆ ಬಯಲಾಗಿದೆ. ಕ್ಷೇತ್ರ ಪುನರ್ ವಿಂಗಡನೆ ಮಾಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ರಾಜಕೀಯ ಮಾಡಿಕೊಳ್ಳಬಹುದು ಎಂಬ ತಂತ್ರ ವಿಫಲವಾಗಿದೆ ಎಂದು ಜಿಲ್ಲಾ ಕೆ ಡಿ ಪಿ ಸದಸ್ಯ, ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಅವರು ಹೇಳಿದ್ದಾರೆ.
ಕೇಂದ್ರ ಸರಕಾರ ಮಹಿಳೆಯರ ಹೆಸರಿನಲ್ಲಿ ತಂತ್ರಗಳನ್ನು ಬಳಸಿಕೊಂಡು ಸಾಂವಿಧಾನದ ಆಶಯ ಹಾಳು ಮಾಡಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಇದಕ್ಕೆ ಆಸ್ಪದ ನೀಡಿಲ್ಲ ಎಂಬುದನ್ನು ದೇಶದ ಜನತೆ ಈಗಾಗಲೇ ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಮಹಿಳಾ ಪರವಾಗಿ ನಿಂತಿದ್ದು, ದೇಶದ ಬೆಳವಣಿಗೆಗೆ ಪೂರಕವಾಗಿ ಅವಕಾಶಗಳನ್ನೂ ನೀಡಿದೆ. ಮುಂದೆಯೂ ಮಹಿಳಾ ಅಭಿವೃದ್ಧಿಗೆ ಪೂರಕವಾದ ಅಂಶಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದಿದ್ದಾರೆ.
- Advertisement -


