Sunday, October 18, 2026
Homeತಾಜಾ ಸುದ್ದಿಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಿಂದ ಚಿವನ್ನ ಖರೀದಿಸಬೇಡಿ: ಕೊಪ್ಪಳದಲ್ಲಿ  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ

ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಿಂದ ಚಿವನ್ನ ಖರೀದಿಸಬೇಡಿ: ಕೊಪ್ಪಳದಲ್ಲಿ  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ

- Advertisement -
- Advertisement -

ಕೊಪ್ಪಳ; ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಿಂದ ಚಿವನ್ನ ಖರೀದಿಸಬೇಡಿ ಎಂದು ಕೊಪ್ಪಳದಲ್ಲಿ  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಕ್ಷಯ ತೃತೀಯಾ ಹಿಂದೂಗಳ ದೊಡ್ಡ ಹಬ್ಬ. ಅವತ್ತು ಬಂಗಾರ ತಗೊಂಡ್ರೆ ಮನೆ ಸಮೃದ್ದಿಯಾಗಿರತ್ತೆ ಅನ್ನೋ ನಂಬಿಕೆ. ಈ ಬಾರಿ ಹಲಾಲ್ ಮುಕ್ತ ಬಂಗಾರ ಕಡಿಮೆ ಮಾಡಬೇಕು. ಮುಸ್ಲಿಂ ಜ್ಯುವೆಲರ್ ಶಾಪ್ ಅಲ್ಲಿ ಖರೀದಿ ಮಾಡಬಾರದು. ಅವರು ಅಲ್ಲಾ ಒಬ್ಬನೇ ದೇವರು,ಮೂರ್ತಿ ಪೂಜೆ ವಿರೋಧ ಮಾಡ್ತಾರೆ. ನಾವು ಅವರ ಕಡೆ ಬಂಗಾರ ಖರೀದಿ ಮಾಡಿದ್ರೆ ಅಪಶಕುನ, ಅಶುದ್ಧ ಎಂದಿದ್ದಾರೆ.

ಹೀಗಾಗಿ ಎಲ್ಲ ಹಿಂದೂಗಳಿಗೆ ನಾನು ಆಗ್ರಹ ಮಾಡತಿದ್ದೀವಿ. ಹಲಾಲ್ ಮುಕ್ತ ಬಂಗಾರ ಖರೀದಿ ಮಾಡಿ. ನಮ್ಮ ಧರ್ಮದ ಉಳಿವು,ದೇಶದ ಉಳಿವಿಗಾಗಿ,ಹಿಂದೂಗಳ ಸುರಕ್ಷತೆಗೆ ಅಕ್ಷಯ ತೃತೀಯ ಹಲಾಲ್ ಮುಕ್ತ ಆಗಬೇಕು.ಹಿಂದೂಗಳ ಅಂಗಡಿಯಲ್ಲಿಯೇ ಬಂಗಾರ ಖರೀದಿ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.

- Advertisement -

Latest News

error: Content is protected !!