Monday, June 8, 2026
Homeಕರಾವಳಿಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಬೆಳ್ಳಾರೆ ಯತೀಶ್  ಅರ್ವಾರ್ ನೇಮಕ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಬೆಳ್ಳಾರೆ ಯತೀಶ್  ಅರ್ವಾರ್ ನೇಮಕ

- Advertisement -
- Advertisement -

ಬೆಳ್ತಂಗಡಿ ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಬೆಳ್ಳಾರೆಯ ಯತೀಶ್  ಅರ್ವಾರ್ ಅವರನ್ನು  ನೇಮಕ ಮಾಡಲಾಗಿದೆ. ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಬೆಳ್ತಂಗಡಿ ಬಿಜೆಪಿ ಪ್ರಭಾರಿಯಾಗಿದ್ದರು. ಅವರೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆ ನೂತನ ಪ್ರಭಾರಿ ಜವಾಬ್ದಾರಿಯನ್ನು ಯತೀಶ್  ಅರ್ವಾರ್  ಅವರನ್ನು ನೇಮಕ ಮಾಡಲಾಗಿದೆ.

ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುತ್ತಿರುವ ಯತೀಶ್  ಅರ್ವಾರ್  ಅವರು ಮೂಲತಃ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ನಿವಾಸಿ. ಯತೀಶ್ ಅವರು ಬಿ.ಎ. ಎಲ್‌ಎಲ್‌ಬಿ ಪದವೀಧರರು ಕೂಡ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಪೂರ್ಣಾವಧಿ ಕಾರ್ಯಕರ್ತರಾಗಿ 2004ರಿಂದ 2009ರವರೆಗೆ ಕಾರ್ಯ ನಿರ್ವಹಿಸಿದ್ದರು.ಎಬಿವಿಪಿ ಚಿತ್ರದುರ್ಗ ನಗರ ಸಂಘಟನಾ ಕಾರ್ಯದರ್ಶಿಯಾಗಿ 2004ರಿಂದ 2006ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲ ಚಿತ್ರದುರ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ 2006ರಿಂದ 2008ರವರೆಗೆ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!