ನಾಗ್ಪುರ: ಮೆಡಿಕಲ್ ಶಾಪ್‌ನಲ್ಲಿ ಬಿಯರ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ
ಲಾಕ್‌ಡೌನ್ ಹಿನ್ನಲೆ ಮದ್ಯದ ಅಂಗಡಿಗಳು ಬಂದ್ ಆಗಿದೆ. ಮೇ 3ರವರೆಗೆ ಮತ್ತೆ ಲಾಕ್‌ಡೌನ್ ಮುಂದುವರೆದಿದ್ದು, ಕುಡುಕರಿಗೆ ಭಾರಿ ನಿರಾಸೆಯಾಗಿದೆ. ಕುಡಿತದ ಚಟ ಇದ್ದವರು ಅಡ್ಡ ಹಾದಿ ಮೂಲಕ ಮದ್ಯದ ಬಾಟಲಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮೆಡಿಕಲ್ ಶಾಪ್‌ನಲ್ಲಿ ಮಾತ್ರಗಳ ಜೊತೆಗೆ ಬಿಯರ್ ಮಾರಾಟ ಮಾಡುತ್ತಿದ್ದ.
ನಿಶಾಂತ್ ಅಲಿಯಾನ್ ಬಂಟಿ (36) ಎಂಬುವವನು ನಾಗ್ಪುರದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ. ಅಗತ್ಯ ವಸ್ತುಗಳ ವಿಭಾಗದಲ್ಲಿ ಬರುವ ಕಾರಣ ಆ ಅಂಗಡಿಗೆ ಲಾಕ್‌ಡೌನ್ ಸಮಯದಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಆತ ಮಾತ್ರೆ, ಔಷದಿಗಳ ಜೊತೆಗೆ ಬಿಯರ್ ಮಾರಾಟ ಮಾಡುತ್ತಿದ್ದ. ಮದ್ಯಕ್ಕೆ ಇರುವ ಬೇಡಿಕೆಯನ್ನು ಬಳಸಿಕೊಳ್ಳಲು ತನ್ನ ಅಂಗಡಿಯಲ್ಲಿ ಬಿಯರ್ ಮಾರಾಟ ಮಾಡುತ್ತಿದ್ದ. ಮಂಗಳವಾರ ಈತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಜೊತೆಗೆ 80 ಬಿಯರ್ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.