Tuesday, June 23, 2026
Homeತಾಜಾ ಸುದ್ದಿಮಂಗಳೂರು: ಕೆಲಸದ ಒತ್ತಡದಿಂದ ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ ಶರಣು

ಮಂಗಳೂರು: ಕೆಲಸದ ಒತ್ತಡದಿಂದ ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ ಶರಣು

- Advertisement -
- Advertisement -

ಮಂಗಳೂರು : ಬ್ಯಾಂಕ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶರ್ಬತ್ ಕಟ್ಟೆಯ ಫ್ಲ್ಯಾಟ್‌ವೊಂದರಲ್ಲಿ ನಡೆದಿದೆ. ಇಲ್ಲಿನ ನಿವಾಸಿ, ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್ ಪದ್ಮಾವತಿ (52) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು.

ಮೂಲತಃ ಶಕ್ತಿನಗರದ ಪದ್ಮಾವತಿ ಶರ್ಬತ್ ಕಟ್ಟೆಯಲ್ಲಿ ಇತ್ತೀಚೆಗೆ ಫ್ಲ್ಯಾಟ್ ಖರೀದಿಸಿದ್ದು, ಗೃಹಪ್ರವೇಶ ಕಾರ್ಯಕ್ರಮ ಕಳೆದ ಸೋಮವಾರ ನಡೆದಿತ್ತು. ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ನಡೆದಿದೆ ಎಂದು ದೂರಲಾಗಿದೆ. ಕೆಲಸದ ಒತ್ತಡದಿಂದ ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!