Friday, May 17, 2024
Homeಕರಾವಳಿಬಂಟ್ವಾಳ;ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ಧೆಯ ಸರ ಕಳ್ಳತನ

ಬಂಟ್ವಾಳ;ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ಧೆಯ ಸರ ಕಳ್ಳತನ

spot_img
- Advertisement -
- Advertisement -

ಬಂಟ್ವಾಳ: ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ಧೆಯೋರ್ವರ ಕುತ್ತಿಗೆಯಲ್ಲಿದ ಲಕ್ಷಾಂತರ ರೂ‌ ಮೌಲ್ಯದ ಚಿನ್ನದ ಸರ ಕಳ್ಳತನವಾಗಿರುವ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಭಂಡಾರಿಬೆಟ್ಟು ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.

ಮೀನಾಕ್ಷಿ ಭಂಡಾರಿಬೆಟ್ಟು ಎಂಬವರ ಕುತ್ತಿಗೆಯಿಂದ ಸುಮಾರು 1.50 ಲಕ್ಷ ಮೌಲ್ಯದ 4 ಪವನ್ ತೂಕ ದ ಚಿನ್ನದ ಸರ ಕಳವಾಗಿದೆ. ಮೀನಾಕ್ಷಿ ಅವರು ಬಿಸಿರೋಡಿನಲ್ಲಿ ಮನೆಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.

ಕಳ್ಳಿಮಾರ್ ಅಂಗಡಿಯೊಂದರಿಂದ ಸಾಮಾಗ್ರಿಗಳನ್ನು ಖರೀದಿಸಿದ ಬಳಿಕ ಮೀನಾಕ್ಷಿ ಅವರು ಬಂಟ್ವಾಳಕ್ಕೆ ತೆರಳುವ ಸರ್ವೀಸ್ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ರಿಕ್ಷಾದಲ್ಲಿ ಅಪರಿಚಿತ ಮೂವರು ಮಹಿಳೆಯರಿದ್ದರು ಎನ್ನಲಾಗಿದೆ. ರಿಕ್ಷಾದಲ್ಲಿ ಕುಳಿತುಕೊಳ್ಳುವ ಮುನ್ನ ಓರ್ವ ಮಹಿಳೆ ರಿಕ್ಷಾದಿಂದ ಇಳಿದು ಮೀನಾಕ್ಷಿ ಅವರನ್ನು ಮಧ್ಯದಲ್ಲಿ ಕೂರಲು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಮಧ್ಯದಲ್ಲಿ ಕುಳಿತಿದ್ದಾರೆ. ಬಳಿಕ ಮೀನಾಕ್ಷಿ ಅವರು ಭಂಡಾರಿಬೆಟ್ಟು ಮನೆಯ ಸಮೀಪ ಇಳಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ರಿಕ್ಷಾವನ್ನು ಫಾಲೋ ಮಾಡಿ ಹೋಗಿ ರಿಕ್ಷಾ ಚಾಲಕನನ್ನು ಕೇಳಿದಾಗ ರಿಕ್ಷಾದಲ್ಲಿ ಬಂಗಾರದ ಪತ್ತೆಯಾಗಿಲ್ಲ.

ಆದ್ರೆ ಅದಾಗಲೇ ರಿಕ್ಷಾದಲ್ಲಿದ್ದ ಮೂವರು ಮಹಿಳೆಯರು ಬೈಪಾಸ್ ನಲ್ಲಿ ಇಳಿದು ಕಾರ್ಕಳಕ್ಕೆ ತೆರಳುವ ಬಸ್ ನಲ್ಲಿ ತೆರಳಿದ್ದಾರೆ ಅಂತಾ ರಿಕ್ಷಾ ತಾಲಕ ತಿಳಿಸಿದ್ದಾನೆ. ಮಹಿಳೆಯರೇ ರಿಕ್ಷಾದಲ್ಲಿ ಸರವನ್ನು ಎಗರಿಸಿರಬಹುದು ಎಂಬ ಸಂಶಯ ಮೂಡಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!