Friday, June 2, 2023
Homeಕರಾವಳಿಬಂದಾರು: ಶ್ರೀ ರಾಮ್ ಗೆಳೆಯರ ಬಳಗದಿಂದ 30 ಕುಟುಂಬಕ್ಕೆ ಅಕ್ಕಿ ವಿತರಣೆ

ಬಂದಾರು: ಶ್ರೀ ರಾಮ್ ಗೆಳೆಯರ ಬಳಗದಿಂದ 30 ಕುಟುಂಬಕ್ಕೆ ಅಕ್ಕಿ ವಿತರಣೆ

- Advertisement -
- Advertisement -

ಬಂದಾರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಜೈ ಶ್ರೀ ರಾಮ್ ಗೆಳೆಯರ ಬಳಗ, ಶ್ರೀರಾಮ ನಗರ ಇದರ ಸದಸ್ಯರುಗಳ ಸಹಕಾರದೊಂದಿಗೆ ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆಗೆ ಒಳಗಾಗಿದ್ದ ಬಂದಾರು ಗ್ರಾಮದ ಪಾಣೇಕಲ್ಲು ಬೂತ್ ನ ಸುಮಾರು 29 ಹಾಗೂ ಮೈರೋಲ್ಡಡ್ಕ ಬೂತ್ ನ 1ಕುಟುಂಬಕ್ಕೆ ಆಹಾರ ಕಿಟ್ ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿನ ಬಳಗದ ಸ್ಥಾಪಕ ಅಧ್ಯಕ್ಷರು ಹಾಗು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಬಿ.ಕೆ, ಬಳಗ ಅಧ್ಯಕ್ಷರಾದ ಕುಶಾಲಪ್ಪ ,ಕಾರ್ಯದರ್ಶಿಯಾದ ಶ್ರೀಧರ್ ಬಿ.ಕೆ, ಬಳಗದ ಮಾಜಿ ಅಧ್ಯಕ್ಷರುಗಳಾದ ರಾಜಶೇಖರ್ ಬಿ.ಕೆ, ಶಿವರಾಮ್, ಪ್ರಕಾಶ್ ಕೆ,ಸದಸ್ಯರುಗಳಾದ ಲಿಂಗಪ್ಪ, ಚಂದ್ರಹಾಸ ಕುಂಬಾರ, ಕೃಷ್ಣ ,ಜಯಂತ್ ಉಪಸ್ಥಿತರೀದ್ದರು.


ಈ ಮಾನವೀಯ ಕಾರ್ಯಕ್ಕೆ ಸಹಕರಿಸಿದ ಬಳಗದ ಎಲ್ಲ ಸದಸ್ಯರನ್ನು ಪಂಚಾಯತಿ ಆಡಳಿತವಯಿಂದ ಅಧ್ಯಕ್ಷರಾದ ಉದಯ ಬಿ.ಕೆ ಅಭಿನಂದಿಸಿದರು.

- Advertisement -

Latest News

error: Content is protected !!