- Advertisement -
- Advertisement -
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆ ಮಾರಾಟ ಮಾಡದೆ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಅವರ ನೆರವಿಗೆ ಧಾವಿಸಿದೆ.
ಇದೇ ಸಂದರ್ಭದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಲಾಕ್ಡೌನ್ ಘೋಷಿಸಿರುವುದರಿಂದ ರಾಜ್ಯದಲ್ಲಿ ರೈತರು ಬೆಳೆದ ತರಕಾರಿಗೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದ ರೈತರು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಬರುತ್ತಾರೆ. ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸಬೇಕು. ಅವರಿಗೆ ದಕ್ಕಬೇಕಾದ ಹಣ ಅವರ ಪಾಲಾಗಲಿ ಎಂದು ಹೇಳಿದ್ದಾರೆ.
ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರ ಮನೆ ಬಾಗಿಲಿಗೆ ತರಕಾರಿ ಖರೀದಿಗೆ ಬಂದಾಗ ಖರೀದಿಸುವಂತೆ ತಿಳಿಸಿದ್ದು, ಈ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
- Advertisement -