- Advertisement -
- Advertisement -
ಮಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಗಡಿ ಪ್ರವೇಶಿಸಿದ ಆರೋಪದ ಮೇಲೆ 7 ಜನರನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಇಂದು ನಡೆದಿದೆ.
ಮೂಲತ ಮಂಗಳೂರಿನ ಅಡ್ಡೂರು ಕಾಂಜಿಲಕೋಡಿ ನಿವಾಸಿಗಳಾಗಿದ್ದ ಈ ಕುಟುಂಬ, ಕೆಲ ದಿನಗಳ ಹಿಂದೆ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಅಲ್ಲೇ ಉಳಿದುಕೊಂಡಿದ್ದರು.
ಮಂಜೇಶ್ವರದಿಂದ ಗುರುವಾರ ಸಂಜೆ ಆಗಮಿಸಿದ್ದು, ಶುಕ್ರವಾರ ಕಾಂಜಿಲಕೋಡಿಯಲ್ಲಿ ಪಡಿತರ ಪಡೆಯಲೆಂದು ಸಾಲಿನಲ್ಲಿ ನಿಂತಿದ್ದಾಗ ಸ್ಥಳೀಯರು ಇವರನ್ನು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಬಜ್ಪೆ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿ, ಆಶಾಕಾರ್ಯಕರ್ತೆಯರ ಸಹಾಯದ ಮೂಲಕ ಮಂಜೇಶ್ವರದಿಂದ ಬಂದ ಕುಟುಂಬದ 7 ಜನರನ್ನು ವೆನ್ಲಾಕ್ ದಾಖಲಿಸಿದ್ದಾರೆ.
ಇವರನ್ನು 14 ದಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
- Advertisement -