Sunday, June 7, 2026
Homeತಾಜಾ ಸುದ್ದಿದೆಹಲಿ: ಈ ವರ್ಷವೂ ದೀಪಾವಳಿಗೆ ಪಟಾಕಿ ಸಂಗ್ರಹ, ಮಾರಾಟ ಮತ್ತು ಬಳಕೆಗೆ ನಿಷೇಧ; ಕೇಜ್ರಿವಾಲ್!

ದೆಹಲಿ: ಈ ವರ್ಷವೂ ದೀಪಾವಳಿಗೆ ಪಟಾಕಿ ಸಂಗ್ರಹ, ಮಾರಾಟ ಮತ್ತು ಬಳಕೆಗೆ ನಿಷೇಧ; ಕೇಜ್ರಿವಾಲ್!

- Advertisement -
- Advertisement -

ದೆಹಲಿ: ದೆಹಲಿಯಲ್ಲಿ ಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿದ್ದರಿಂದ ಅರವಿಂದ ಕೇಜ್ರಿವಾಲ್ ಸರ್ಕಾರವು ದೀಪಾವಳಿ ಸಮಯದಲ್ಲಿ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.

ಕಳೆದ ಮೂರು ವರ್ಷಗಳಲ್ಲಿ ದೀಪಾವಳಿಯ ಸಮಯದಲ್ಲಿ ದಿಲ್ಲಿಯ ಮಾಲಿನ್ಯದ ಅಪಾಯಕಾರಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷದಂತೆ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಹಾಗೂ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ.ಇದರಿಂದ ಜನ ಜೀವನ ರಕ್ಷಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ, ವ್ಯಾಪಾರಿಗಳು ಈಗಾಗಲೇ ಪಟಾಕಿಗಳನ್ನು ಮಾರಾಟಕ್ಕಾಗಿ ಸಂಗ್ರಹಿಸಿದ ನಂತರ ನಿಷೇಧವನ್ನು ವಿಧಿಸಲಾಯಿತು, ಅದು ಅವರಿಗೆ ನಷ್ಟವನ್ನು ಉಂಟುಮಾಡಿತು. ಸಂಪೂರ್ಣ ನಿಷೇಧದ ದೃಷ್ಟಿಯಿಂದ ಪಟಾಕಿಗಳನ್ನು ಸಂಗ್ರಹಿಸದಂತೆ ನಾನು ವ್ಯಾಪಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!