Monday, June 8, 2026
HomeUncategorizedಮಂಗಳೂರಿನ‌ ಬಲ್ಲಾಳ ಬಾಗ್  ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

ಮಂಗಳೂರಿನ‌ ಬಲ್ಲಾಳ ಬಾಗ್  ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

- Advertisement -
- Advertisement -

ಮಂಗಳೂರು: ಇಲ್ಲಿನ ಬಲ್ಲಾಳ್ ಬಾಗ್ ಜಂಕ್ಷನ್ ನಲ್ಲಿ ಏಪ್ರಿಲ್‌ 9 ರಂದು‌‌ ನಡೆದ ಬಿಎಂಡಬ್ಲ್ಯು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್‌ ಸವಾರೆ  ಪ್ರೀತಿ ಮನೋಜ್  ಅವರ ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದು, ಕುಟುಂಬ ಸದಸ್ಯರು ಆಕೆಯ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಏಪ್ರಿಲ್ 9 ರಂದು ಬಲ್ಲಾಳ್ ಬಾಗ್ ನಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಡಿವೈಡರ್ ಹಾರಿ ರಸ್ತೆಯ ಇನ್ನೊಂದು ಬದಿಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಸಿಗ್ನಲ್‌ನಲ್ಲಿ ಕಾಯುತ್ತಿದ್ದ ಪ್ರೀತಿ ಮನೋಜ್ ಮೇಲೆ ಡಿಕ್ಕಿ ಹೊಡೆದಿತ್ತು. ಅಪಘಾತದ ನಂತರ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ಪ್ರೀತಿಯವರ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ ನಂತರ ಆಕೆಯ ಕುಟುಂಬ ಸದಸ್ಯರು ಆಕೆಯ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅತಿವೇಗದಿಂದ ಬಂದ ಬಿಎಂಡಬ್ಲ್ಯು ಮಹಿಳೆಗೆ ಡಿಕ್ಕಿ ಹೊಡೆದಿರುವುದು ದಾಖಲಾಗಿತ್ತು.

- Advertisement -

Latest News

error: Content is protected !!