Thursday, June 4, 2026
Homeತಾಜಾ ಸುದ್ದಿಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ತುಮಕೂರಿಗೆ ತೆರಳುತ್ತಿದ್ದ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಕುಣಿಗಲ್ ನಲ್ಲಿ ಪೊಲೀಸ್...

ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ತುಮಕೂರಿಗೆ ತೆರಳುತ್ತಿದ್ದ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಕುಣಿಗಲ್ ನಲ್ಲಿ ಪೊಲೀಸ್ ವಶಕ್ಕೆ

- Advertisement -
- Advertisement -

ತುಮಕೂರು: ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರನ್ನು ತುಮಕೂರು ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಜರಂಗದಳ ಪ್ರಾಂತ ಸಹ ಸಂಚಾಲಕ‌ರಾಗಿರುವ ಮುರಳಿಕೃಷ್ಣ ಹಸಂತಡ್ಕ ಅವರನ್ನು ಕುಣಿಗಲ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರಿನಲ್ಲಿ ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಮುರಳಿಕೃಷ್ಣ ಭಾಗವಹಿಸಬೇಕಿತ್ತು.

ಮಂಗಳೂರಿನಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಕುಣಿಗಲ್ ನಲ್ಲಿ ವಶಕ್ಕೆ ಪಡೆದಿರುವ ಪೋಲಿಸರು, ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ತಡೆ ಒಡ್ಡಿದ್ದಾರೆ.

ಕುಣಿಗಲ್ ಪೊಲೀಸರು ಮುರಳಿಕೃಷ್ಣ ಹಸಂತಡ್ಕರನ್ನು ವಶಕ್ಕೆ ಪಡೆದಿದ್ದು, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಕುರಿತು ತುಮಕೂರಿನಲ್ಲಿ ಇಂದು ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು.

- Advertisement -

Latest News

error: Content is protected !!