Thursday, May 2, 2024
Homeಕರಾವಳಿಮಂಗಳೂರು ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಇ-ಆಡಳಿತ’ದ ಗರಿ

ಮಂಗಳೂರು ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಇ-ಆಡಳಿತ’ದ ಗರಿ

spot_img
- Advertisement -
- Advertisement -

ಮಂಗಳೂರು: ರಾಜ್ಯದ ಅತ್ಯುತ್ತುಮ ಇ- ಆಡಳಿತ ಜಾರಿಗೊಳಿಸಿರುವ ವಿಶ್ವವಿದ್ಯಾಲಯ ಎಂಬ ಪ್ರಶಂಸೆಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಾತ್ರವಾಗಿದೆ.

ಮಂಗಳೂರು ವಿಶ್ವವಿದ್ಯಾಲಯವು ದೈನಂದಿನ ಕಚೇರಿ ಚಟುವಟಿಕೆಗಳಲ್ಲಿ ಕಾಗದರಹಿತ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ವಿಶ್ವವಿದ್ಯಾಲಯವು ‘ಅತ್ಯುತ್ತಮ ಇ-ಆಡಳಿತ’ ಗರಿಯನ್ನು ಮುಡಿಗೇರಿಸಿಕೊಂಡಿದೆ.

ಉನ್ನತ ಶಿಕ್ಷಣ ಇಲಾಖೆಯು ಆಡಳಿತ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ 10 ಅಂಶಗಳನ್ನು ಪರಿಗಣಿಸಿ, ವಿಶ್ವವಿದ್ಯಾಲಯಗಳ ಮೌಲ್ಯಮಾಪನ ಮಾಡಲು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಈ ಸಮಿತಿಯು ಪ್ರಾತ್ಯಕ್ತಿಕೆ ಮೂಲಕ ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡಿರುವ ಏಳು ವಿಶ್ವವಿದ್ಯಾಲಯಗಳಲ್ಲಿ ಇ- ಆಡಳಿತ ವಿಭಾಗದಲ್ಲಿ ಮಾನ್ಯತೆ ಪಡೆದಿರುವ ಮಂಗಳೂರು ವಿಶ್ವವಿದ್ಯಾನಿಲಯವು, 150 ಲಕ್ಷ ಪ್ರೋತ್ಸಾಹಧನ ಪಡೆಯಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್‌ ಅಮೀನ್, `ಕೋವಿಡ್ 19ರ ಪೂರ್ವದಲ್ಲಿ ಕಾಗದರಹಿತ ಕಚೇರಿ ಅನುಷ್ಠಾನಗೊಂಡಿದ್ದರೂ, ಕೋವಿಡ್ ಸಂದರ್ಭದಲ್ಲಿ ಇದಕ್ಕೆ ವೇಗ ದೊರಕಿತು. ನಂತರ ಒಂದೊಂದೇ ವಿಭಾಗವನ್ನು ಇ ಆಡಳಿತಕ್ಕೆ ಒಳಪಡಿಸಿದ್ದು, ಈಗ ಸರ್ವರ್ ಡೌನ್‌ನಂತಹ ತುರ್ತು ಸಂದರ್ಭ ಹೊರತುಪಡಿಸಿದರೆ, ಶೇ 100 ಕಾಗದರಹಿತ ವ್ಯವಸ್ಥೆ ಜಾರಿಯಲ್ಲಿದೆ’ ಎಂದು ತಿಳಿಸಿದರು.

ಪ್ರತಿ ವಿಭಾಗದಲ್ಲೂ ಕಂಪ್ಯೂಟರ್ ಲ್ಯಾಬ್, ಭಾಷಾ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ವಿಭಾಗಕ್ಕೆ ಮಾಹಿತಿ ನೀಡುವುದಾದರೂ ಮುದ್ರಿತ ಪ್ರತಿ ಬದಲಾಗಿ, ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ವಿವಿಯಲ್ಲಿ ಇ- ಆಡಳಿತ ಘಟಕ ಇದ್ದು, ಇದಕ್ಕೆ ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಇ ಆಡಳಿತ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾಧ್ಯಾಪಕರು, ಸಿಬ್ಬಂದಿಗೆ ಹಲವು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಇವೆಲ್ಲ ಅಂಶಗಳನ್ನು ಪರಿಗಣಿಸಿ, ನಮ್ಮ ವಿವಿಯನ್ನು ಆಯ್ಕೆ ಮಾಡಲಾಗಿದೆ. ನಮ್ಮ ವಿವಿಗೆ ಇ- ಆಡಳಿತ ವಿಭಾಗದಲ್ಲಿ 73 ಅಂಕಗಳು ದೊರೆತಿವೆ ಎಂದು ವಿವರಿಸಿದರು.

- Advertisement -
spot_img

Latest News

error: Content is protected !!