Wednesday, June 24, 2026
Homeಕರಾವಳಿಡಬ ಆ್ಯಸಿಡ್ ದಾಳಿ ಪ್ರಕರಣ:ಆರೋಪಿ ಅಭಿನ್ ಸಿದ್ಧತೆ ನಡೆಸಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ

ಡಬ ಆ್ಯಸಿಡ್ ದಾಳಿ ಪ್ರಕರಣ:ಆರೋಪಿ ಅಭಿನ್ ಸಿದ್ಧತೆ ನಡೆಸಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ

- Advertisement -
- Advertisement -

ಮಂಗಳೂರು: ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಅಭಿನ್ ಕೃತ್ಯ ಎಸಗುವ ಮುನ್ನ ಸಿದ್ಧತೆ ನಡೆಸಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಸೋಮವಾರ ಬೆಳಗ್ಗೆಯೇ ಕಡಬಕ್ಕೆ ಬಂದಿದ್ದ ಆರೋಪಿ ಅಭಿನ್, ಬೇಕರಿಯೊಂದರಲ್ಲಿ ತನ್ನ ಮೊಬೈಲ್ ಫೋನ್ ಚಾರ್ಜ್ ಗೆ ಇರಿಸಿ ಬ್ಯಾಗ್ ‌ನಿಂದ ಆ್ಯಸಿಡ್ ಬಾಟಲ್ ಅನ್ನು ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ.

ಆ್ಯಸಿಡ್ ಬಾಟಲಿಯೊಂದಿಗೆ ಬೇಕರಿಯಿಂದ ಹೊರ ಹೋಗಿದ್ದ ಅಭಿನ್, ಕಡಬ ತಹಸೀಲ್ದಾರ್ ಕಚೇರಿ ಬಳಿ ತಾನು ಧರಿಸಿದ್ದ ಬಟ್ಟೆ ಕಳಚಿ ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಎಂಟ್ರಿಯಾಗಿದ್ದ ಎನ್ನಲಾಗಿದೆ.

ಭಾನುವಾರ ನೀಲಂಬೂರಿನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಅಭಿನ್, ಸೋಮವಾರ ಬೆಳಗ್ಗೆ ಬಸ್ ನಲ್ಲಿ ಮಂಗಳೂರಿನಿಂದ ಕಡಬಕ್ಕೆ ಬಸ್ ನಲ್ಲಿ ಪ್ರಯಾಣಿಸಿದ್ದ ಎಂದು ಹೇಳಲಾಗಿದೆ.

ಸೋಮವಾರ ಬೆಳಗ್ಗೆಯೇ ಕಡಬದ ಅಂಗಡಿಯಲ್ಲಿ ರಬ್ಬರ್ ಬೆಳೆಗಾರರು ಬಳಸುವ ಆ್ಯಸಿಡ್ ಖರೀದಿಸಿದ್ದ ಅಭಿನ್, ಎರಡು ವರ್ಷಗಳಿಂದ ಸಂತ್ರಸ್ಥೆ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!