Wednesday, June 24, 2026
Homeಕರಾವಳಿ8 ತಿಂಗಳ ಅವಧಿಯಲ್ಲಿ ಪುತ್ತೂರು ಕ್ಷೇತ್ರಕ್ಕೆ ₹1,400 ಕೋಟಿ ಅನುದಾನ; ಶಾಸಕ ಅಶೋಕ್‌ಕುಮಾರ್

8 ತಿಂಗಳ ಅವಧಿಯಲ್ಲಿ ಪುತ್ತೂರು ಕ್ಷೇತ್ರಕ್ಕೆ ₹1,400 ಕೋಟಿ ಅನುದಾನ; ಶಾಸಕ ಅಶೋಕ್‌ಕುಮಾರ್

- Advertisement -
- Advertisement -

ಪುತ್ತೂರು: 8 ತಿಂಗಳ ಅವಧಿಯಲ್ಲಿ ಪುತ್ತೂರು ಕ್ಷೇತ್ರಕ್ಕೆ ₹1,400 ಕೋಟಿ ಅನುದಾನ ಬಂದಿದ್ದು, ಇದು ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಬಂದಂತಹ ಅಪಾರವಾದ ಅನುದಾನವಾಗಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಇವರು ಮಂಗಳವಾರದಂದು ಸಂಪ್ಯದಲ್ಲಿ ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆ ನಡೆಯಲಿರುವ ₹1.57ಕೋಟಿಯ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಪುತ್ತೂರಿನಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ನಡೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ವಲಯ ಮಟ್ಟದ ಒಂದೇ ಕಡೆ ಆ ವ್ಯಾಪ್ತಿಯ ಎಲ್ಲ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಕಾಮಗಾರಿಗಳು ಸಮರ್ಪಕ ರೀತಿಯಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕಾಂಗ್ರೆಸ್ ಮುಖಂಡ ಬೂಡಿಯಾ‌ ಪುರುಷೋತ್ತಮ ರೈ ಮಾತನಾಡಿದರು. ಆರ್ಯಾಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಅಶೋಕ್‌, ಸದಸ್ಯರಾದ ಯತೀಶ್ ದೇವಾ, ಪವಿತ್ರಾ ರೈ, ಪೂರ್ಣಿಮಾ ರೈ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಆರ್ಯಾಪು ವಲಯ ಕಾಂಗ್ರೆಸ್ ಉಸ್ತುವಾರಿಗಳಾದ ಮಹಾಬಲ ರೈ ವಳತ್ತಡ್ಕ, ರಶೀದ್ ಸಂಪ್ಯ, ಕಾಂಗ್ರೆಸ್ ಮುಖಂಡ ಸಿದ್ದೀಕ್‌ ಸುಲ್ತಾನ್ ಭಾಗವಹಿಸಿದ್ದರು. ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ನ ಸ್ವಾಗತಿಸಿ ವಂದಿಸಿದರು.

- Advertisement -

Latest News

error: Content is protected !!