Wednesday, June 3, 2026
Homeಕರಾವಳಿಕಾಸರಗೋಡುಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಕಂದಮ್ಮ ಸಾವು

ಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಕಂದಮ್ಮ ಸಾವು

- Advertisement -
- Advertisement -

ಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಬೆದ್ರಡ್ಕ ಕಂಬಾರ್ ಎಂಬಲ್ಲಿ ನಡೆದಿದೆ.ಕಂಬಾರು ನಿವಾಸಿ ನೌಶಾದ್ ಎಂಬವರ ಪುತ್ರ ಮುಹಮ್ಮದ್ ಸೌಹಾನ್ ಹಬೀಬ್ ಮೃತಪಟ್ಟ ಮಗು.

ಭಾನುವಾರ ಸಂಜೆ ಮುಹಮ್ಮದ್ ಸೌಹಾನ್ ಹಬೀಬ್ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ದಿಢೀರ್ ನಾಪತ್ತೆಯಾಗಿತ್ತು.ತೀವ್ರ ಹುಡುಕಾಟದ ಬಳಿಕ ಮನೆ ಸಮೀಪದ 200 ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ.ಕೃಷಿಕರಾದ ನೌಶಾದ್ ಅವರ ಏಕೈಕ ಪುತ್ರನಾಗಿದ್ದ ಹಬೀಬ್.ಈ ಬಗ್ಗೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!