- Advertisement -
- Advertisement -
ಸುಳ್ಯ;ಚಲಿಸುತ್ತಿದ್ದ ಬೈಕ್ ಮೇಲೆ ಕಡವೆ ಜಿಗಿದ ಪರಿಣಾಮ ಬೈಕ್ ಸವಾರನಿಗೆ ಗಾಯಗಳಾಗಿರುವ ಘಟನೆ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ನಡೆದಿದೆ.
ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಗಾಯಗೊಂಡ ಸವಾರ. ತಿರುಮಲೇಶ್ವರ ಅವರು ತನ್ನ ಮನೆಯಿಂದ ಪಂಜ ಕಡೆ ಹೋಗುತ್ತಿದ್ದಾಗ ಜಳಕದಹೊಳೆ ಎಂಬಲ್ಲಿ ಭಾನುವಾರ ರಾತ್ರಿ ಕಡವೆ ಬೈಕ್ ಮೇಲೆ ಜಿಗಿದಿದೆ. ಪರಿಣಾಣ ತಿರುಮಲೇಶ್ವರ ಅವರ ಕೈ,ಕಾಲು, ಭುಜದ ಭಾಗಕ್ಕೆ ಗಂಭೀರ ಗಾಯವಾಗಿದ್ದು ಕಡಬದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -