Wednesday, June 3, 2026
Homeಕರಾವಳಿಉಡುಪಿಉಡುಪಿ: ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಕಳ್ಳರ ಕೈಚಳಕ

ಉಡುಪಿ: ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಕಳ್ಳರ ಕೈಚಳಕ

- Advertisement -
- Advertisement -

ಉಡುಪಿ: ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ಉಡುಪಿ ನಗರದ ಮಿಷನ್ ಕಂಪೌಂಡ್ ಬಳಿ ನಡೆದಿದೆ. ಇಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸರಕಾರಿ ವಸತಿಗೃಹಗಳಿಗೆ ಕಳ್ಳರು ನುಗ್ಗಿ ಅಪಾರ ಪ್ರಮಾಣ ನಗ ನಗದು ಕಳ್ಳತನ ಮಾಡಿದ್ದಾರೆ.

ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ.  ಒಟ್ಟು 6 ಅಪಾರ್ಟ್ಮೆಂಟ್ ಇದ್ದು ವಿವಿಧ ಇಲಾಖೆಗಳ ಸರಕಾರಿ ನೌಕರರ ಕುಟುಂಬಗಳು ವಾಸವಾಗಿವೆ. ಎರಡು ದಿನಗಳ ಕಾಲ ರಜೆ ಇದ್ದ ಕಾರಣ ಇಲ್ಲಿನ ಕುಟುಂಬಗಳು ತಮ್ಮ ಊರಿಗೆ ತೆರಳಿದ್ದವು .  ಮನೆಯಲ್ಲಿ ಯಾರು ಇಲ್ಲದ ದಿನಗಳಲ್ಲಿ ಈ ಸಮುಚ್ಚಯದಲ್ಲಿನ ಆರು ಮನೆಗಳ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆನ್ನಲಾಗಿದೆ.

ಆರು ಮನೆಗಳ ಪೈಕಿ ಎರಡು ಮನೆಗಳಲ್ಲಿನ ಚಿನ್ನಾಭರಣ, ಮತ್ತೆರಡು ಮನೆಗಳಲ್ಲಿನ ನಗದು ಕಳವಾಗಿದ್ದು ಉಳಿದ ಎರಡು ಮನೆಗಳಲ್ಲಿ ಕಳವಿಗೆ ಯತ್ನ ನಡೆಸಿರುವುದಾಗಿ ಗೊತ್ತಾಗಿದೆ. ಈ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಇಲ್ಲದ ಕಾರಣ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!