Friday, June 5, 2026
Homeತಾಜಾ ಸುದ್ದಿಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರು; ದೇವರ ಮೇಲೆ ಆಣೆ ಮಾಡಿಸಿದ ಪೊಲೀಸರು

ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರು; ದೇವರ ಮೇಲೆ ಆಣೆ ಮಾಡಿಸಿದ ಪೊಲೀಸರು

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರಿಗೆ “ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದಿಲ್ಲ” ಎಂದು ದೇವರ ಮೇಲೆ ಆಣೆ ಮಾಡಿಸಿದ ಘಟನೆ ನಡೆಯಿತು.

ಸಂಚಾರ ನಿಯಮ ಉಲ್ಲಂಘಿಸಿದ 25 ಆಟೋಗಳನ್ನು ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯ ವಿವಿಧೆಡೆಯಲ್ಲಿ ವಶಕ್ಕೆ ಪಡೆಯಲಾಯಿತು. ಆಟೋಗಳ ದಾಖಲೆ ಪರಿಶೀಲಿಸಿದ ಸಂಚಾರ ಪೊಲೀಸರು, ದಂಡ ವಿಧಿಸಿದರು. ನಂತರದಲ್ಲಿ ಆಟೋ ಚಾಲಕರಿಂದ ಪ್ರಮಾಣ ಮಾಡಿಸಿದರು.

ಪೊಲೀಸರು ಆಟೋ ಚಾಲಕರಿಗೆ “ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಆಟೋಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುತ್ತೇನೆ ಎಂದು ದೇವರ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿಸಿದರು.

ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್, ದೇವರ ಮೇಲೆ ಪ್ರಮಾಣ ಮಾಡಿದರೆ ಭಯ, ಭಕ್ತಿಯಿಂದ ನಡೆದುಕೊಳ್ಳಬಹುದು ಎಂಬ ನಂಬಿಕೆಯೊಂದಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಕಾರ್ಯಾಚರಣೆಯಲ್ಲಿ ಪಶ್ಚಿಮ ಸಂಚಾರ ಠಾಣೆಯ ಎಎಸ್‌ಐ ಕೃಷ್ಣಪ್ಪ, ಪ್ರಶಾಂತ್, ಪ್ರಕಾಶ್, ಸುರೇಶ್, ಕಿರಣ್, ಹರೀಶ್, ಪ್ರವೀಣ್, ಚಂದ್ರು ಭಾಗವಹಿಸಿದ್ದರು.

- Advertisement -

Latest News

error: Content is protected !!