Friday, August 28, 2026
Homeಕರಾವಳಿಬೆಳ್ತಂಗಡಿ : ವಿವಾಹಿತ ಮಹಿಳೆಯ ಅಂಗಡಿಗೆ ನುಗ್ಗಿ ಯುವಕನಿಂದ ಹಲ್ಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ...

ಬೆಳ್ತಂಗಡಿ : ವಿವಾಹಿತ ಮಹಿಳೆಯ ಅಂಗಡಿಗೆ ನುಗ್ಗಿ ಯುವಕನಿಂದ ಹಲ್ಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಹಣಕಾಸಿನ ವಿಚಾರದಲ್ಲಿ ವಿವಾಹಿತ ಮಹಿಳೆಯ ಉಜಿರೆಯಲ್ಲಿರುವ ಬಟ್ಟೆ ಅಂಗಡಿ ಶಾಪ್ ಗೆ ಯುವಕನೊಬ್ಬ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿಕೊಂಡು ಆರೋಪಿ ನವೀನ್ ಕನ್ಯಾಡಿಯನ್ನು  ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

*ಪ್ರಕರಣದ ವಿವರ :* ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಧರ್ಮಸ್ಥಳ ನಿವಾಸಿ ಅವಿವಾಹಿತ ಮಹಿಳೆಯ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಧರ್ಮಸ್ಥಳದ ಕನ್ಯಾಡಿ ನಿವಾಸಿ ನವೀನ್ ಕನ್ಯಾಡಿ ಎಂಬಾತ ಹಣಕಾಸಿನ ವಿಚಾರದಲ್ಲಿ ಏಕಾಏಕಿ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮ ಮಂದಿರದ ಮುಂದೆ ಇರುವ ಹೂವಿನ ವ್ಯಾಪಾರಿಯಾಗಿರುವ ನವೀನ್ ಕನ್ಯಾಡಿ ಎಂಬಾತ ಧರ್ಮಸ್ಥಳದ ವಿವಾಹಿತ ಮಹಿಳೆಯಿಂದ ಸಾಲವಾಗಿ ಪಡೆದ ಹಣವನ್ನು ವಾಪಸ್ ವಿವಾಹಿತ ಮಹಿಳೆ ಹಿಂದಿರುಗಿಸಲು ಹೇಳಿದಕ್ಕೆ ಏಕಾಏಕಿ ಉಜಿರೆಯ ಮಹಿಳೆಯ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಕಪಾಳಕ್ಕೆ ಸೇರಿದಂತೆ ವಿವಿಧೆಡೆ ಹಲ್ಲೆ ಮಾಡಿರುವ ಬಗ್ಗೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

ಆರೋಪಿ ಬಂಧನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗಾದ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354,447,504,506 ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ನವೀನ್ ಕನ್ಯಾಡಿಯನ್ನು ಬಂಧಿಸಿ  ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ನೇತೃತ್ವದ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ.

- Advertisement -

Latest News

error: Content is protected !!