Friday, June 5, 2026
Homeಕರಾವಳಿವಿಟ್ಲ; ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿ, ಚಾಲಕನಿಗೆ ಗಾಯ

ವಿಟ್ಲ; ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿ, ಚಾಲಕನಿಗೆ ಗಾಯ

- Advertisement -
- Advertisement -

ವಿಟ್ಲ,: ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಗೊಂಡವರು.

ಇಸ್ಮಾಯಿಲ್ ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಕೊಡಂಗಾಯಿ ಸೇತುವೆ ಬದಿಯಲ್ಲಿ ಮುಂಗುಸಿಯೊಂದು ರಸ್ತೆಗೆ ಅಡ್ಡಬಂದಿದೆ. ಮುಂಗುಸಿಯನ್ನು ರಕ್ಷಿಸುವ ಉದ್ದೇಶದಿಂದ ಚಾಲಕ ಹಠಾತ್ ಬ್ರೇಕ್ ಹಾಕುತ್ತಿದ್ದಾರೆ. ಆಗ ನಿಯಂತ್ರಣ ತಪ್ಪಿ ರಿಕ್ಷಾ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದೆ. ಈ ವೇಳೆ ಚಾಲಕ ಇಸ್ಮಾಯಿಲ್ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ವಿಟ್ಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!